ಶ್ರೀ ಕೃಷ್ಣ, ಶ್ರೀ ರಾಮ ಇಬ್ಬರೂ ಮಾಂಸಾಹಾರಿಗಳೇ.. ಈ ಮಾತನ್ನು ನಾನು ಉದ್ದೇಶಪೂರ್ವಕವಾಗಿಯೇ ಹೇಳುತ್ತಿದ್ದೇನೆ.. ದೇಶಾದ್ಯಂತ ಆಹಾರ ಪದ್ಧತಿ ಬಗ್ಗೆ ಚರ್ಚೆ ಆಗುತ್ತಿದೆ. ಸಾಕಷ್ಟು ಮಂದಿ ವಿದ್ವಾಂಸರಿದ್ದಾರೆ, ಈ ಬಗ್ಗೆ ಚರ್ಚೆ ಆಗಲಿ ಎಂದ ಪ್ರಮೋದ್ ಮಧ್ವರಾಜ್
ಉಡುಪಿ(ಅ.15): ಶ್ರೀ ಕೃಷ್ಣ, ಶ್ರೀ ರಾಮ ಇಬ್ಬರೂ ಮಾಂಸಹಾರಿಗಳು.. ಈಗಂತಾ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿವಾದಾತ್ಮ ಹೇಳಿಕೆ ನೀಡಿದ್ದಾರೆ.

ಮಣಿಪಾಲದ ಡಿಸಿ ಕಚೇರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಆಚರಣೆ ವೇಳೆ ಮಾತನಾಡಿದ ಅವರು, ಶ್ರೀ ಕೃಷ್ಣ, ಶ್ರೀ ರಾಮ ಇಬ್ಬರೂ ಮಾಂಸಾಹಾರಿಗಳೇ.. ಈ ಮಾತನ್ನು ನಾನು ಉದ್ದೇಶಪೂರ್ವಕವಾಗಿಯೇ ಹೇಳುತ್ತಿದ್ದೇನೆ.. ದೇಶಾದ್ಯಂತ ಆಹಾರ ಪದ್ಧತಿ ಬಗ್ಗೆ ಚರ್ಚೆ ಆಗುತ್ತಿದೆ. ಸಾಕಷ್ಟು ಮಂದಿ ವಿದ್ವಾಂಸರಿದ್ದಾರೆ, ಈ ಬಗ್ಗೆ ಚರ್ಚೆ ಆಗಲಿ ಎಂದು ಅವರು ಹೇಳಿದರು. ಇನ್ನೂ ಇದೇ ವ್ಯಾಸರಾಯರು ಮದುವೆ ಆಗದ ಮೀನುಗಾರ ಮಹಿಳೆಯ ಪುತ್ರ ಎಂದು ಹೇಳಿದರು.
