ನವದೆಹಲಿ[ಜು.04]: ತಮ್ಮ ಅಜ್ಜ ಎಚ್‌.ಡಿ.ದೇವೇಗೌಡರನ್ನು ತುಮಕೂರಿನಲ್ಲಿ ಮಣಿಸಿ ಸಂಸತ್‌ ಪ್ರವೇಶಿಸಿರುವ ಜಿ.ಎಸ್‌.ಬಸವರಾಜು ಅವರೊಂದಿಗೆ ಮುದ್ದೆ ಮುರಿದ ಪ್ರಜ್ವಲ… ರೇವಣ್ಣರ ನಡೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಂಗಳವಾರ ಮಧ್ಯಾಹ್ನ ಕರ್ನಾಟಕ ಭವನದಲ್ಲಿ ಪ್ರಜ್ವಲ್ ಅವರು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಅಲ್ತಾಫ್‌ ಅವರು ಬಸವರಾಜು ಅವರೊಂದಿಗೆ ರಾಗಿ ಮುದ್ದೆ ತಿನ್ನುತ್ತಿರುವ ಪೋಟೋವನ್ನು ಪ್ರಜ್ವಲ… ರೇವಣ್ಣರ ಅಭಿಮಾನಿಗಳ ಫೇಸ್‌ಬುಕ್‌ ಖಾತೆ ‘ಪ್ರಜ್ವಲ್ ರೇವಣ್ಣ-ವಾಯ್ಸ್ ಆಫ್‌ ಯೂತ್‌’ನಲ್ಲಿ ‘ಡೆಲ್ಲಿಯಲ್ಲ ಅಮೆರಿಕಾಕ್ಕೆ ಹೋದ್ರೂ ರಾಗಿಮುದ್ದೆ ಇರ್ಬೇಕು ನಮಗೆ’ ಎಂದು ಅಡಿ ಶೀರ್ಷಿಕೆ ನೀಡಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಅಜ್ಜನಂತೆ ಸಂಸತ್ತಿನಲ್ಲಿ ಕನ್ನಡದ ಧ್ವನಿಯಾಗ್ತಾರಾ ಪ್ರಜ್ವಲ್?

ಈ ಪೋಟೋಕ್ಕೆ ದೇವೇಗೌಡ ಅಭಿಮಾನಿಗಳು ಗರಂ ಆಗಿದ್ದಾರೆ. ತಾತನನ್ನು ಸೋಲಿಸಿದವರ ಜೊತೆ ಊಟ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿದ್ದಾರೆ. ಆದರೆ ಫೋಟೋದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ರೇವಣ್ಣ, ನಾನು ಮತ್ತು ಅಲ್ತಾಫ್‌ ಕೇಂದ್ರ ಸರ್ಕಾರದ ಮುಂದಿರುವ ರಾಜ್ಯದ ಯೋಜನೆಗಳ ಪ್ರಸ್ತಾವನೆ ಬಗ್ಗೆ ಚರ್ಚೆ ಮಾಡುತ್ತಾ ಊಟ ಮಾಡುತ್ತಿದ್ದೆವು. ಅಷ್ಟರಲ್ಲಿ ಅಲ್ಲಿಗೆ ಬಸವರಾಜು ಅವರು ಬಂದರು. ಇಡೀ ಕರ್ನಾಟಕ ಭವನದಲ್ಲಿ ಇರುವುದು ಒಂದೇ ಡೈನಿಂಗ್‌ ರೂಮ್ ಅವರು ಪಕ್ಕದಲ್ಲೇ ಬಂದು ಕೂತರು. ಇದರಲ್ಲಿ ವಿಶೇಷ ಏನೂ ಇಲ್ಲ. ನಾವು ಊಟ ಮಾಡಿ ಎದ್ದೆವು. ಯಾವುದೇ ಚರ್ಚೆ ಮಾಡಿಲ್ಲ ಎಂದಿದ್ದಾರೆ.