ನ.8ರಂದು ಅಪನಗದೀಕರಣ ಘೋಷಣೆಯಾದಾಗ 6858 ದಶಲಕ್ಷ 1,೦೦೦ ರು. ನೋಟುಗಳು ಚಲಾವಣೆಯಲ್ಲಿದ್ದವು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಎಸ್.ಕೆ. ಗಂಗ್ವಾರ್ ಫೆಬ್ರವರಿ 3ರಂದು ಸಂಸತ್ತಿಗೆ ಮಾಹಿತಿ ನೀಡಿದ್ದರು.

ಮುಂಬೈ(ಆ.27): 500 ರು. ಹಾಗೂ 1000 ರು. ಹಳೆಯನ ನೋಟುಗಳ ಅಪನಗದೀಕರಣ ನಡೆದ ನಂತರ ಶೇ.99ರಷ್ಟು 1000 ರು. ನೋಟುಗಳು ವಾಪಸು ಬಂದಿವೆ ಎಂದು ಖುದ್ದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡಿದ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ನ.8ರಂದು ಅಪನಗದೀಕರಣ ಘೋಷಣೆಯಾದಾಗ 6858 ದಶಲಕ್ಷ 1,೦೦೦ ರು. ನೋಟುಗಳು ಚಲಾವಣೆಯಲ್ಲಿದ್ದವು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಎಸ್.ಕೆ. ಗಂಗ್ವಾರ್ ಫೆಬ್ರವರಿ 3ರಂದು ಸಂಸತ್ತಿಗೆ ಮಾಹಿತಿ ನೀಡಿದ್ದರು. ಇವುಗಳ ಒಟ್ಟಾರೆ ಮೌಲ್ಯ 6.86 ಲಕ್ಷ ಕೋಟಿ ರು. ಆಗಿತ್ತು. ಈ ಪೈಕಿ 8.925 ಕೋಟಿ ರು. ಮೌಲ್ಯದ ನೋಟುಗಳು ಇನ್ನೂ ಚಲಾವಣೆಯಲ್ಲಿವೆ (ಪರೋಕ್ಷವಾಗಿ ವಾಪಸ್ ಬಂದಿಲ್ಲ ಎಂದರ್ಥ) ಎಂದು ಆರ್‌ಬಿಐ ಕಳೆದ ಮಾರ್ಚ್‌ನಲ್ಲಿ ಹೇಳಿತ್ತು. ಇದರ ಅನುಸಾರ, ಈ 8925 ಕೋಟಿ ರು. ಮೌಲ್ಯವು ಶೇ.1.3ರಷ್ಟು ಆಗುತ್ತದೆ. ಹೀಗಾಗಿ ಶೇ.98.7ರಷ್ಟು ಮೌಲ್ಯದ 1೦೦೦ ರು. ನೋಟುಗಳು ಆರ್‌ಬಿಐ ಖಜಾನೆಗೆ ವಾಪಸ್ ಬಂದಿವೆ ಎಂದು ಅಂದಾಜಿಸಬಹುದಾಗಿದೆ ಎಂದು ವಿಶ್ಲೇಷಿಸಲಾಗಿದೆ.