ಜೊತೆಗೆ ಇಬ್ಬರ ಖಾತೆ ಬದಲಾಯಿಸಲಾಗಿದ್ದು, ರಮೇಶ್ ಜಾರಕಿ ಹೊಳಿಯವರಿಗೆ ಸಹಕಾರ ಹಾಗೂ ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಜೊತೆಗೆ ಕೌಶಲ್ಯ ಅಭಿವೃದ್ಧಿ ಖಾತೆ ನೀಡಲಾಗಿದೆ. ಪ್ರಿಯಾಂಕ್ ಖರ್ಗೆ, ರುದ್ರಪ್ಪ ಲಮಾಣಿ, , ಪ್ರಮೋದ್ ಮಧ್ವರಾಜ್, ಈಶ್ವರ ಖಂಡ್ರೆ ಅವರಿಗೆ ರಾಜ್ಯ ಖಾತೆಯಿಂದ ಸಂಪುಟಕ್ಕೆ ಬಡ್ತಿ ನೀಡಲಾಗಿದೆ.
ಬೆಂಗಳೂರು(ಆ.01): ಸಚಿವ ಸಂಪುಟ ವಿಸ್ತರಣೆಯಾದ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಗೃಹ , ಹೆಚ್. ಎಂ. ರೇವಣ್ಣ ಅವರಿಗೆ ಸಾರಿಗೆ, ಆರ್.ಬಿ. ತಿಮ್ಮಾಪುರ್'ಗೆ ಅಬಕಾರಿ, ಗೀತಾ ಮಹದೇವ್ ಪ್ರಸಾದ್ ಅವರಿಗೆ ಸಕ್ಕರೆ ಮತ್ತು ಸಣ್ಣ ಕೈಗಾರಿಗೆ ನೀಡಲಾಗಿದೆ.
ರೇವಣ್ಣ ಮತ್ತು ತಿಮ್ಮಾಪುರ್ ಅವರು ಸಂಪುಟ ದರ್ಜೆ ಗೀತಾ ಅವರು ರಾಜ್ಯ ಖಾತೆ ಸಚಿವ ಸ್ಥಾನ ನೀಡಲಾಗಿದೆ. ಜೊತೆಗೆ ಇಬ್ಬರ ಖಾತೆ ಬದಲಾಯಿಸಲಾಗಿದ್ದು, ರಮೇಶ್ ಜಾರಕಿ ಹೊಳಿಯವರಿಗೆ ಸಹಕಾರ ಹಾಗೂ ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಜೊತೆಗೆ ಕೌಶಲ್ಯ ಅಭಿವೃದ್ಧಿ ಖಾತೆ ನೀಡಲಾಗಿದೆ. ಪ್ರಿಯಾಂಕ್ ಖರ್ಗೆ, ರುದ್ರಪ್ಪ ಲಮಾಣಿ, , ಪ್ರಮೋದ್ ಮಧ್ವರಾಜ್, ಈಶ್ವರ ಖಂಡ್ರೆ ಅವರಿಗೆ ರಾಜ್ಯ ಖಾತೆಯಿಂದ ಸಂಪುಟಕ್ಕೆ ಬಡ್ತಿ ನೀಡಲಾಗಿದೆ.
ಬಿಜೆಪಿ ನಾಯಕರಿಂದ ಪ್ರತಿಭಟನೆ ವ್ಯಕ್ತವಾದ ಹಿನ್ನಲೆಯಲ್ಲಿ ಅರಣ್ಯ ಸಚಿವ ರಮನಾಥ್ ರೈ ಅವರಿಗೆ ನೀಡಬೇಕಾಗಿದ್ದ ಗೃಹ ಖಾತೆಯನ್ನು ರಾಮಲಿಂಗಾ ರೆಡ್ಡಿ ಅವರಿಗೆ ನೀಡಲಾಗಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಾದಗೆ ಆಸ್ಪದ ನೀಡದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ
