ಪಾಂಡಿಚೇರಿ(ಆ.15): ಶಾಲಾ,ಕಾಲೇಜು, ಕಚೇರಿಯಲ್ಲಿ, ಕಟ್ಟಡ ಸೇರಿದಂತೆ ವಿವಿದೆಡೆ ಭಾರತೀಯರು ಸ್ವಾತಂತ್ರ್ಯ ದಿನಾಚರಣೆ  ಆಚರಿಸುತ್ತಾರೆ. ಆದರೆ ಪಾಂಡಿಚೇರಿಯ ಡೈವಿಂಗ್ ಸ್ಕೂಲ್‌ನ ತರಬೇತುದಾರ ಎಸ್.ಬಿ.ಅರವಿಂದ ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. ಪಾಂಡಿಚೇರಿ ಸಮುದ್ರದ ತಳಭಾಗಕ್ಕೆ ಇಳಿದ ಅರವಿಂದ್ 60 ಅಡಿ ಆಳದಲ್ಲಿ ಭಾರತದ ತ್ವಿವರ್ಣ ಧ್ವಜ ಇಟ್ಟು ಸಲ್ಯೂಟ್ ಹೊಡೆದಿದ್ದಾರೆ.

ಇದನ್ನೂ ಓದಿ: 73ನೇ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯ ಮೇಲೆ ಪಿಎಂ ಮೋದಿ ಧ್ವಜಾರೋಹಣ

ಪಾಂಡಿಚೇರಿಯ ಟೆಂಪರ್ ಅಡ್ವೆಂಚರ್ ಸಂಸ್ಥಾಪಕ ಅರವಿಂದ್, 73ನೇ ಸ್ವಾತಂತ್ರ್ಯೋತ್ಸವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಪಾಂಡಿಚೇರಿ ಸಮುದ್ರದ ತಳಭಾಗದಲ್ಲಿ ಧ್ವಜಾರೋಹ ಮಾಡಲು ಎಲ್ಲಾ ತಯಾರಿ ಮಾಡಿಕೊಂಡು ಆಗಸ್ಟ್ 15ರಂದು ಡೈವ್ ಮೂಲಕ ಸಮುದ್ರಕ್ಕೆ ಹಾರಿದ್ದಾರೆ. ಬಳಿಕ 60 ಅಡಿ ತಳಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಿ ದೇಶದ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜದ ವೈಭವ ನೋಡ!

ಅರವಿಂದ್ ಈ ಹಿಂದೆ ಕೂಡ ಸಮುದ್ರ ಮಟ್ಟದ ತಳಭಾಗದಲ್ಲಿ ತ್ವಿವರ್ಣ ಧ್ವಜ ಹಾರಿಸಿದ್ದಾರೆ. ಈ  ಸ್ವಾತಂತ್ರ್ಯ ದಿನಾಚರಣೆಗೆ ಸಮುದ್ರ ತಳಭಾಗದಲ್ಲಿ ಧ್ವಜ ಹಾರಿಸಲು ಎರಡು  ಕಾರಣಗಳನ್ನು ಅರವಿಂದ್ ನೀಡಿದ್ದಾರೆ. ಮೊದಲನೇ ಕಾರಣ, ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಇಮ್ಮಡಿ ಮಾಡುವುದು. 2ನೇ ಕಾರಣ, ನಮ್ಮ ದೇಶದ ಸಮುದ್ರ ಹಾಗೂ ನೀರು ಎಷ್ಟು ಕಲುಷಿತವಾಗಿದೆ ಅನ್ನೋದನ್ನು ತೋರಿಸಲು 60 ಅಡಿ ತಳಭಾಗದಲ್ಲಿ ಧ್ವಜಾರೋಹಣ ಮಾಡಿದ್ದೇನೆ ಎಂದು ಅರವಿಂದ್ ಹೇಳಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಮೊದಲ ಬಾರಿ ಹುಬ್ಬಳ್ಳಿ ತಿರಂಗಾ

ಪಾಂಡಿಚೇರಿ ಸಮುದ್ರ ತೀರದಿಂದ 5 ಕಿ.ಮೀ ದೂರ ಹೋಗಿ ಸಮದ್ರದೊಳಕ್ಕೆ ಡೈವ್ ಮಾಡಿದ್ದಾರೆ. ಅರವಿಂದ್ ಜೊತೆ ಫೋಟೋಗ್ರಾಫರ್ ಕೂಡ ಡೈವ್ ಮಾಡಿದ್ದಾರೆ. ನಮ್ಮ ಅದೃಷ್ಟ ಚೆನ್ನಾಗಿತ್ತು. ಮಳೆಯಾಗುತ್ತಿರುವ ಕಾರಣ ತಳಭಾಗದ ನೀರು ಸ್ವಚ್ಚವಾಗಿತ್ತು. ಇಲ್ಲವಾದಲ್ಲಿ ಪ್ರತಿ ಬಾರಿ ಸಮುದ್ರ ತಳಭಾಗ ಪ್ರವೇಶಿಸಿದಾಗ ಪ್ಲಾಸ್ಟಿಕ್ ಹಾಗೂ ಇತರ ಮಲಿನಗಳಿಂದದ ನೀರು ಶುಚಿಯಾಗಿರುವುದಿಲ್ಲ. ತಳಭಾಗದಲ್ಲಿ ಚಪ್ಪಲಿಗಳು, ಪ್ಲಾಸ್ಟಿಕ್ ಬಾಟಲ್, ಗಾಜು, ಕಬ್ಬಿಣ ಚೂರುಗಳು ಸೇರಿದಂತೆ ಭೂಮಿ ಮೇಲಿನ ಎಲ್ಲಾ ತ್ಯಾಜ್ಯಗಳು ಸಮದ್ರ ತಳಭಾಗದಲ್ಲಿವೆ ಎಂದು ಅರವಿಂದ್ ಹೇಳಿದರು. ದಯವಿಟ್ಟು ನಮ್ಮ ಸಮುದ್ರ, ನದಿಯನ್ನು ಶುಚಿಯಾಗಿಡಿ ಎಂದು ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಕಳಕಳಿಯ ವಿನಂತಿ ಮಾಡಿದ್ದಾರೆ.