73ನೇ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯ ಮೇಲೆ ಪಿಎಂ ಮೋದಿ ಧ್ವಜಾರೋಹಣ
ಭಾರತ ಇಂದು 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನಾಚರಿಸುತ್ತಿದೆ| ಕೆಂಪು ಕೋಟೆಯ ಮೇಲೆ ಪಿಎಂ ಮೋದಿ| ಬಿಳಿ ಬಣ್ಣದ ಪೈಜಾಮಾ ಹಾಗೂ ಹಳದಿ ಪೇಟ ಧರಿಸಿದ ಪ್ರಧಾನಿ ಮೋದಿ
ನವದೆಹಲಿ[ಆ.15]: ಭಾರತ ಇಂದು 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನಾಚರಿಸುತ್ತಿದೆ. ಈ ಹಿನ್ನೆಲೆ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಪಿಎಂ ಮೋದಿ ಧ್ಜಜಾರೋಹಣ ನೆರವೇರಿಸಿದ್ದಾರೆ. ಈ ಮೂಲಕ ಕೆಂಪುಕೋಟೆಯ ಮೇಲೆ 6 ಬಾರಿ ಭಾಷಣ ಮಾಡಿದ ಬಿಜೆಪಿಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದಾಖಲೆಯನ್ನು ಸರಿಗಟ್ಟ
ಬಿಳಿ ಬಣ್ಣದ ಪೈಜಾಮಾ ಹಾಗೂ ಹಳದಿ ಪೇಟ ಧರಿಸಿದ ಪ್ರಧಾನಿ ಮೋದಿ ಮೊದಲು ರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಸಮಾಧಿಗೆ ನಮಿಸಿದ್ದಾರೆ. ಬಳಿಕ ಅಲ್ಲಿಂದ ಕೆಂಪುಕೋಟೆಗೆ ಆಗಮಿಸಿದ ಮೋದಿ ದ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿ ಭಾಷಣ ಮಾಡುತ್ತಿದ್ದಾರೆ.
ಈ ಹಿಂದಿನ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಸ್ವಚ್ಛ ಭಾರತ, ಆಯುಷ್ಮಾನ್ ಭಾರತ ಯೋಜನೆ, ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳನ್ನು ಘೋಷಿಸಿದ್ದರು. ಹೀಗಾಗಿ ಈ ಬಾರಿಯೂ ಪ್ರಮುಖ ಯೋಜನೆಯೊಂದನ್ನು ಪ್ರಸ್ಥಾಪಿಸಬಹುದು ಎನ್ನಲಾಗಿದೆ. ಅಲ್ಲದೇ ಆರ್ಥಿಕ ಹಿಂಜರಿಕೆಯ ಕುರಿತು ಉಂಟಾಗಿರುವ ಕಳವಳದ ಬಗ್ಗೆಯೂ ಮಾತನಾಡುವ ನಿರೀಕ್ಷೆ ಇದೆ.
"
ವಿದ್ಯಾರ್ಥಿಗಳಿಂದ ನವ ಭಾರತ ರಚನೆ
ಮೋದಿ ಅವರ ಭಾಷಣದ ವೇಳೆ ದೆಹಲಿಯ ವಿವಿಧ ಶಾಲೆಗಳ 3500 ಬಾಲಕಿಯರು ಹಾಗೂ 5000 ಬಾಲಕರು ಮತ್ತು 700 ಎನ್‌ಎಸ್‌ಸಿ ವಿದ್ಯಾರ್ಥಿಗಳು ‘ನವ ಭಾರತ’ ಶಬ್ದದ ರಚನೆಯಲ್ಲಿ ನಿಂತು ಏಕತೆಯ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ.