ಬಿಜೆಪಿಯ ಹೇಳಿಕೆಗೆ ತಕ್ಷಣ ತಿರುಗೇಟು ನೀಡಿರುವ ಆರ್’ಜೆಡಿ ಉಪ-ಮುಖ್ಯಮಂತ್ರಿ ತೇಜಸ್ವಿ ಯಾದವ್, ಕಮಲವು ಕೇವಲ ಬಿಜೆಪಿಗೆ ಮಾತ್ರ ಸೇರಿದ್ದಲ್ಲ. ಆರ್’ಜೆಡಿ ಪಕ್ಷದ ಚಿಹ್ನೆಯು (ಲಾಟೀನು) ದೇಶದ ಅಸಂಖ್ಯಾತ ಮನೆಯಲ್ಲಿ ನೇತಾಡುತ್ತಿರುವುದನ್ನು ಬಿಜೆಪಿ ನೆನಪಿನಲ್ಲಿಡಬೇಕು ಎಂದು ಹೇಳಿದ್ದಾರೆ.

ಪಾಟ್ನಾ (ಫೆ.05): ಕಾರ್ಯಕ್ರಮವೊಂದರ ಉದ್ಘಾಟನೆ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಮಲದ ಚಿತ್ರಕ್ಕೆ ಕೇಸರಿ ಬಣ್ಣ ತುಂಬಿರುವುದು ರಾಜಕೀಯ ವಲಯಗಳಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದೆ.

ಕಮಲವನ್ನು ಬಿಡಿಸುವ ಮೂಲಕ ನಿತೀಶ್ ಕುಮಾರ್ ತಮ್ಮ ರಾಜಕೀಯ ಅಭಿಲಾಶೆಯನ್ನು ವ್ಯಕ್ತಪಡಿಸಿದ್ದಾರೆಂದು ಬಿಜೆಪಿ ಹೇಳಿದೆ.

ಕಮಲವನ್ನು ಬಿಡಿಸುವ ಮೂಲಕ ನಿತೀಶ್ ತಾನು ಸ್ವತಂತ್ರನಾಗಿರುವೆನೆಂದು ಲಾಲು ಪ್ರಸಾದ್ ಯಾದವ್’ಗೆ ಪದೇ ಪದೇ ನೆನಪಿಸುತ್ತಾರೆ, ಎಂದು ಗಿರಿರಾಜ್ ಕಿಶೋರ್ ಆರ್’ಜೆಡಿಗೆ ಟಾಂಗ್ ನೀಡಿದ್ದಾರೆ.

ಬಿಜೆಪಿಯ ಹೇಳಿಕೆಗೆ ತಕ್ಷಣ ತಿರುಗೇಟು ನೀಡಿರುವ ಆರ್’ಜೆಡಿ ಉಪ-ಮುಖ್ಯಮಂತ್ರಿ ತೇಜಸ್ವಿ ಯಾದವ್, ಕಮಲವು ಕೇವಲ ಬಿಜೆಪಿಗೆ ಮಾತ್ರ ಸೇರಿದ್ದಲ್ಲ. ಆರ್’ಜೆಡಿ ಪಕ್ಷದ ಚಿಹ್ನೆಯು (ಲಾಟೀನು) ದೇಶದ ಅಸಂಖ್ಯಾತ ಮನೆಯಲ್ಲಿ ನೇತಾಡುತ್ತಿರುವುದನ್ನು ಬಿಜೆಪಿ ನೆನಪಿನಲ್ಲಿಡಬೇಕು ಎಂದು ಹೇಳಿದ್ದಾರೆ.

ಇಂತಹ ಸಣ್ಣ ಸಣ್ಣ ವಿಷಯಯಗಳು ಬಿಜೆಪಿಗೆ ಖುಷಿ ನೀಡುವುದಾದರೆ, ಅವರು ಅದರಲ್ಲೇ ಖುಷಿಪಟ್ಟುಕೊಳ್ಳಲಿ ಎಂದು ಹೇಳಿದ್ದಾರೆ.

ನಿನ್ನೆ ಪಾಟ್ನಾದಲ್ಲಿ ಪುಸ್ತಕೋತ್ಸವವನ್ನು ಉದ್ಘಾಟಿಸುವ ಸಂದರ್ಭದಲ್ಲಿ, ಕಲಾವಿದ ರಚಿಸಿರುವ ಕಮಲದ ಚಿತ್ರಕ್ಕೆ ನಿತೀಶ್ ಕುಮಾರ್ ಕೇಸರಿ ಬಣ್ಣವನ್ನು ತುಂಬಿದ್ದರು. ನಿತೀಶ್ ನಡೆಯು ಅವರ ರಾಜಕೀಯ ಉದ್ದೇಶಗಳನ್ನು ಸೂಚಿಸುತ್ತದೆಯೆಂದು ಚರ್ಚೆಗೆ ಗ್ರಾಸವಾಗಿದೆ.