Asianet Suvarna News Asianet Suvarna News

ರಾಜ್ಯ ರಾಜಕಾರಣದಲ್ಲಿ ಮತ್ತೆ ಹೊಸ ಬಾಂಬ್ ಸಿಡಿಸಿದ ಬೆಳಗಾವಿ ಸಾಹುಕಾರ

ಮೈತ್ರಿ ಸರ್ಕಾರದ ಪತನದ ರೂವಾರಿ ಕಾಂಗ್ರೆಸ್‌ನಿಂದ ಅನರ್ಹಗೊಂಡ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಇಂದು ಸಂಕಲ್ಪ ಸಮಾವೇಶ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಆದ್ರೆ ಈ ಸಮಾವೇಶದಲ್ಲಿ ರಮೇಶ್ ಆಡಿದ ಮಾತು ಮತ್ತೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಲಚವ ಮೂಡಿಸಿದೆ. ಹಾಗಾದ್ರೆ ಸಾಹುಕಾರ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ಮುಂದೆ ಓದಿ.

political conference in gokak ramesh Jarkiholi speech highlights
Author
Bengaluru, First Published Sep 7, 2019, 4:42 PM IST

ಬೆಳಗಾವಿ, (ಸೆ.7):  ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಮತ್ತೆ ರಾಜ್ಯ ರಾಜಕಾರಣದಲ್ಲಿ ಹೊಸ ವಿಷಯವೊಂದನ್ನು ತೇಲಿಬಿಟ್ಟಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಗೋಕಾಕನಲ್ಲಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಹಣಕ್ಕಾಗಿ ಹೋಗಿಲ್ಲ. ನನಗೆ ಅನ್ಯಾಯ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಅನ್ಯಾಯ ಆಗಿದ್ದರಿಂದ ನಾನು, ಮಹೇಶ್ ಕುಮಟಳ್ಳಿ  ಈ ನಿರ್ಧಾರ ತಗೆದುಕೊಂಡಿದ್ದೇವೆ. ಸಮ್ಮಿಶ್ರ ಸರ್ಕಾರದ ಆಂತರಿಕ ವ್ಯವಸ್ಥೆಗೆ ಹೆದರಿ ನಿರ್ಧಾರ ಮಾಡಿದೆವು. ಸಿದ್ದರಾಮಯ್ಯ, ಖರ್ಗೆ ಅವರಂತವರು ಇದ್ದರೂ ನನಗೆ ನ್ಯಾಯ ಸಿಗಲಿಲ್ಲ. ನನ್ನ ಜತೆಗೆ 20 ಜನ ಶಾಸಕರು ರಾಜೀನಾಮೆ ನೀಡಿದ್ದಾರೆ. ಇನ್ನು 10 ರಿಂದ 15 ಜನ ಶಾಸಕರು ಇದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದರು. 

ಜನರಿಗೆ ನೆರೆಯ ಚಿಂತೆ, ಸಾಹುಕಾರಗೆ ಅಧಿಕಾರ ಚಿಂತೆ: ಗೋಕಾಕ್‌ನಲ್ಲಿ ‘ಅನರ್ಹ’ ಶಕ್ತಿ ಪ್ರದರ್ಶನ

ನನ್ನನ್ನು ನಂಬಿ 20 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಆ ನಂಬಿದ ಶಾಸಕರ ಪರವಾಗಿ ದೆಹಲಿಗೆ ಹೋಗಿದ್ದೇನೆ. ಆ ಕಾರಣಕ್ಕೆ ಕೆಲವೊಂದು ಸಂದರ್ಭಗಳಲ್ಲಿ ನಾನು ಕ್ಷೇತ್ರದಲ್ಲಿ ಇರಲಿಲ್ಲ. ನಾನು ಪ್ರವಾಹ ಬಂದಾಗ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಕೆಲ ಖಾಸಗಿ ಮಾಧ್ಯಮಗಳು ನನ್ನ ವಿರುದ್ಧ ಅಪ್ರಚಾರ ಮಾಡುತ್ತಿದ್ದಾರೆ ಎಂದು ಅನರ್ಹಗೊಂಡ ಶಾಸಕ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಸ್ಪೀಕರ್ ರಮೇಶ ಕುಮಾರ್ ಅನರ್ಹತೆ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಅನರ್ಹತೆ ಮಾಡಿದರೂ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಅದಕ್ಕೆ ಅವಕಾಶ ಇದೆ. ಆಪರೇಷನ್ ಕಮಲಕ್ಕೆ  ಸತೀಶ್ ಜಾರಕಿಹೊಳಿ, ಎಂ. ಬಿ. ಪಾಟೀಲ್‌ ಕಾರಣ ಎಂದು ಅಚ್ಚರಿ ಹೇಳಿಕೆ ನೀಡಿದರು.

ನನಗೆ ಬಾಲಚಂದ್ರ ಜಾರಕಿಹೊಳಿ ಆಪರೇಷನ್ ಕಮಲ ಬೇಡ ಅಂದಿದ್ದನು‌. ಸತೀಶ್ ಜಾರಕಿಹೊಳಿ ಪದೇ ಪದೆ ಗೋಕಾಕ್‌ಗೆ ಬರುತ್ತಿದ್ದಾನೆ. ಯಾಕಂದ್ರೆ ಯಮಕನಮರಡಿ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿಗೆ ಒದ್ದು ಓಡಿಸುತ್ತಾರೆ ಎಂದು ದೂರಿದರು.

Follow Us:
Download App:
  • android
  • ios