ಎಡಿನ್ಬರ್ಗ್ (ಫೆ.13): ಭಾರತದಲ್ಲಿ ಮುಸ್ಲಿಮ್ ಮಹಿಳೆಯರು ಧರಿಸುವ ಹಿಜಾಬ್ ಚರ್ಚೆಗೊಳಗಾಗುತ್ತಿರುವಾಗ, ಸ್ಕಾಟ್ಲ್ಯಾಂಡ್ ತನ್ನ ಪೊಲೀಸ್ ಪಡೆಯಲ್ಲಿ ಹಿಜಾಬ್ ಧಾರಿಣಿಯರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

ಎಡಿನ್ಬರ್ಗ್ (ಫೆ.13): ಭಾರತದಲ್ಲಿ ಮುಸ್ಲಿಮ್ ಮಹಿಳೆಯರು ಧರಿಸುವ ಹಿಜಾಬ್ ಚರ್ಚೆಗೊಳಗಾಗುತ್ತಿರುವಾಗ, ಸ್ಕಾಟ್ಲ್ಯಾಂಡ್ ತನ್ನ ಪೊಲೀಸ್ ಪಡೆಯಲ್ಲಿ ಹಿಜಾಬ್ ಧಾರಿಣಿಯರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

ಜಗತ್ತಿನ ಅತ್ಯುತ್ತಮ ಪೊಲೀಸ್ ಪಡೆಯೆಂದು ಹೆಸರುವಾಸಿಯಾಗಿರುವ ಸ್ಕಾಟ್ಲ್ಯಾಂಡ್ ಪೊಲೀಸ್, ಇನ್ಮುಂದೆ ಮುಸ್ಲಿಮ್ ಮಹಿಳೆಯರ ಹಿಜಾಬ್ ಅಧಿಕೃತ ಸಮವಸ್ತ್ರವಾಗಿರುವುದೆಂದು ಘೋಷಿಸಿದೆಯೆಂದು 'ದಿ ಇಂಡಿಪೆಂಡೆಂಟ್' ವರದಿ ಮಾಡಿದೆ.

ಈ ಕ್ರಮದಿಂದ ಪೊಲೀಸ್ ಪಡೆಯಲ್ಲಿ ವೈವಿಧ್ಯವಿರುವುದು ಅಲ್ಲದೇ ಮುಸ್ಲಿಮ್ ಮಹಿಳೆಯರು ಪೊಲೀಸ್ ಪಡೆಯನ್ನು ಸೇರಲು ಪ್ರೋತ್ಸಾಹ ಕೂಡಾ ಸಿಗುವುದೆಂದು ಹೇಳಲಾಗಿದೆ. ಹಿಜಾಬ್ ಧರಿಸಲು ೨೦೦೧ರಿಂದಲೇ ಅನುಮತಿ ನೀಡಲಾಗಿದ್ದರೂ ಅದು ಸಾರ್ವತ್ರಿಕವಾಗಿರಲಿಲ್ಲ. ಹಿರಿಯ

ಅಧಿಕಾರಿಯ ಅನುಮತಿ ಪಡೆದು ಮುಸ್ಲಿಮ್ ಮಹಿಳೆ ಹಿಜಾಬ್ ಧರಿಸಬಹುದಿತ್ತು.

ಹೊಸ ಕ್ರಮದಿಂದ ಪೊಲೀಸ್ ಪಡೆಯು ಹೆಚ್ಚು ಬಲಗೊಳ್ಳಲಿದೆಯಲ್ಲದೇ, ಉತ್ತಮ ಪೊಲೀಸಿಂಗ್'ಗೆ ಕೂಡಾ ಸಹಕಾರಿಯಗಲಿದೆಯೆಂದು ಸ್ಕಾಟ್ಲ್ಯಾಂಡ್ ಪೊಲೀಸ್ ಮುಖ್ಯಸ್ಥ ಫಿಲ್ ಗಾರ್ಮ್ಲೇ ಹೇಳಿದ್ದಾರೆ. ಸ್ಕಾಟ್ಲ್ಯಾಂಡ್'ನಲ್ಲಿ ಶೇ.4 ರ‍ಷ್ಟು ಜನಾಂಗೀಯ ಅಲ್ಪಸಂಖ್ಯಾತರ ಜನಸಂಖ್ಯೆಯಿದ್ದು, ಕಳೆದ

ಬಾರಿ ಪೊಲೀಸ್ ನೇಮಕಾತಿ ಪ್ರಕ್ರಿಯೆಗೆ ಆ ಸಮುದಾಯ ಗಳಿಂದ ಕೇವಲ ಶೇ.2.5 ಅರ್ಜಿಗಳು ಬಂದಿದ್ದವು ಎನ್ನಲಾಗಿದೆ.