ಬೆಂಗಳೂರು(ಸೆ. 13): ಮಾಗಡಿರಸ್ತೆಯ ಸುಂಕದಕಟ್ಟೆ ಸಮೀಪದ ಹೆಗ್ಗನಹಳ್ಳಿ ಮಂಗಳವಾರವೂ ರಣಾಂಗಣವಾಗಿದೆ. ನಿನ್ನೆ ಪೊಲೀಸರ ಗುಂಡೇಟಿಗೆ ಉಮೇಶ್ ಎಂಬುವವರು ಬಲಿಯಾದರೂ ಜನರ ಕಾವೇರಿ ಕೆಚ್ಚು ಮುಂದುವರಿದಿದೆ. ಪ್ರದೇಶದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ ಜನರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಪೊಲೀಸರ ಮೇಲೆ ಕಲ್ಲೆಸೆಯುತ್ತಿದ್ದಾರೆ. ಡಿಸಿಪಿ ಹರ್ಷ ನೇತೃತ್ವದಲ್ಲಿ ಪೊಲೀಸರ ತಂಡವು ಜನರನ್ನು ನಿಯಂತ್ರಿಸಲು ಅಶ್ರುವಾಯು ಪ್ರಯೋಗ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ಹೆಗ್ಗನಹಳ್ಳಿ ಬಳಿ ಜನರು ಪೊಲೀಸರ ವಾಹನವನ್ನೇ ಜಖಂಗೊಳಿಸಿದ್ದರು. ಈ ವೇಳೆ, ಗುಂಪು ಚದುರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಅಮಾಯಕ ಉಮೇಶ್ ಬಲಿಯಾಗಿದ್ದರು.