ಉತ್ತರ ಪ್ರದೇಶದ ಬರೇಲಿಯಲ್ಲಿ ಯುವತಿಯೊಬ್ಬಳು ಬದೌನ್ ಪೊಲೀಸ್ ಠಾಣಾಧಿಕಾರಿಯ ವಿರುದ್ಧ ಅಶ್ಲೀಲ ಮೆಸೇಜ್ ಕಳುಹಿಸಿರುವ ಆರೋಪ ಮಾಡಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ SP ಈ ಕುರಿತಾದ ತನಿಖೆಗೆ ಆದೇಶಿಸಿದ್ದಾರೆ.

ಉತ್ತರ ಪ್ರದೇಶ(ಎ.01): ಉತ್ತರ ಪ್ರದೇಶದ ಬರೇಲಿಯಲ್ಲಿ ಯುವತಿಯೊಬ್ಬಳು ಬದೌನ್ ಪೊಲೀಸ್ ಠಾಣಾಧಿಕಾರಿಯ ವಿರುದ್ಧ ಅಶ್ಲೀಲ ಮೆಸೇಜ್ ಕಳುಹಿಸಿರುವ ಆರೋಪ ಮಾಡಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ SP ಈ ಕುರಿತಾದ ತನಿಖೆಗೆ ಆದೇಶಿಸಿದ್ದಾರೆ.

ಮಾದ್ಯಮಗಳಲ್ಲಿ ಪ್ರಸಾರವಾದ ಮಾಹಿತಿ ಅನ್ವಯ ಈ ಪ್ರಕರಣ ಬದೌನ್'ನ ಬಿಸೌಲಿ ಎಂಬ ಹಳ್ಳಿಯಲ್ಲಿ ನಡೆದಿದೆ. ವಾಸ್ತವವಾಗಿ ಈ ಊರಿನ ಮುಖ್ಯಸ್ಥನ ಕಾರ್ಯಕ್ರಮವೊಂದಕ್ಕಾಗಿ ಮನೆ ಎದುರಿರುವ ಖಾಲಿ ಜಾಗವನ್ನು ಕೆಲಸದವರಿಂದ ಶುಚಿಗೊಳಿಸುತ್ತಿದ್ದರು. ಈ ವೇಳೆ ವಿರೋಧ ಪಕ್ಷದ ಜನರು ಅಲ್ಲಿಗೆ ಚಾಗಮಿಸಿ ಕೆಲಸಗಾರರಿಗೆ ಹಿಗ್ಗಾಮುಗ್ಗ ಥಳಿಸಿದ್ದರಂತೆ. ಈಇದನ್ನು ಗಮನಿಸಿದ ಮುಖ್ಯಸ್ಥ 100 ನಂಬರ್'ಗೆ ಕರೆ ಮಾಡಿ ಈ ಕುರಿತಾಗಿ ಮಾಹಿತಿ ರವಾನಿಸಿದ್ದಾರೆ. ಆದರೆ ದೂರು ಪಡೆದ ಪೊಲೀಸರು ಶುಚಿತ್ವ ಕಾರ್ಯದಲ್ಲಿ ತೊಡಗಿದ್ದ ಕೆಲಸಗಾರರನ್ನೇ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರಂತೆ.

ಹೀಗಾಗಿ ಪೊಲೀಸ್ ಠಾಣೆಗೆ ತೆರಳಿದ ಮುಖ್ಯಸ್ಥ ಕೆಲಸಗಾರರನ್ನು ಬಿಡುವಂತೆ ಕೇಳಿಕೊಂಡಿದ್ದಾರೆ, ಆದರೆ ಠಾಣಾಧಿಕಾರಿ ಇದಕ್ಕೊಪ್ಪಿಲ್ಲ. ಬಳಿಕ ಮುಖ್ಯಸ್ಥನ ಮಗಳೇ ಠಾಣಾಧಿಕಾರಿಗೆ ಕರೆ ಮಾಡಿ ಮನೆಯಲ್ಲಿ ಮದುವೆ ಕಾರ್ಯವಿದೆ ಹೀಗಾಗಿ ವಶಕ್ಕೆ ಪಡೆದವರನ್ನು ಬಿಡುವಂಎ ಕೇಳಿಕೊಂಡಿದ್ದಾಳೆ. ಮಗಳ ಮಾತು ಕೇಳುತ್ತಿದ್ದಂತೆಯೇ ಠಾಣಾಧಿಕಾರಿಯೂ ಬಂಧಿತರನ್ನು ಬಿಡುಗಡೆಗೊಳಿಸಿದ್ದಾನೆ.

ಆದರೆ ಈ ಪ್ರಕರಣ ಇಲ್ಲಿಗೇ ನಿಂತಿಲ್ಲ. ಇವೆಲ್ಲದರ ಬಳಿಕ ಠಾಣಾಧಿಕಾರಿ ಪ್ರತಿ ದಿನ ಯುವತಿಗೆ ವಾಟ್ಸಾಪ್ ಮೂಲಕ ಮೆಸೇಜ್ ಕಳುಹಿಸಿ ತನ್ನನ್ನು ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದು, ಇದರಿಂದ ಬೇಸತ್ತ ಯುವತಿ ಆತನ ನಂಬರ್'ನ್ನು ಬ್ಲಾಕ್ ಮಾಡಿದ್ದಳಂತೆ. ಇದಾಧ ಬಳಿಕ ಮಾರ್ಚ್ 27ರಂದು ಮತ್ತೆ ವಿರೋಧ ಪಕ್ಷದ ಜನರು ಮನೆಗೆ ನು್ಗ್ಗಿ ಧಾಂದಲೆ ನಡೆಸಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಎರಡೂ ಪಕ್ಷವರನ್ನು ಬಂಧಿಸಿ ಠಾಣೆಗೊಯ್ದಿದ್ದಾರೆ. ಅಲ್ಲದೇ ಮುಖ್ಯಸ್ಥನಿಗೆ ಥಳಿಸಿ ಲಾಕಪ್'ನಲ್ಲಿ ಕೂಡಿ ಹಾಕಿದ್ದಾರೆ. ಇದನ್ನು ಕಂಡ ಯುವತಿ ಬದೌನ್ ಪೊಲೀಸ್ ಠಾಣೆಯ SP ಗೆ ಕರೆ ಮಾಡಿ ಈ ಕುರಿತಾಗಿ ಮಾಹಿತಿ ರವಾನಿಸಿದ್ದಾಳೆ ಹಾಗೂ ಠಾಣಾಧಿಕಾರಿ ತನಗೆ ನೀಡುತ್ತಿದ್ದ ಕಿರುಕುಳದ ಕುರಿತಾಗಿಯೂ ತಿಳಿಸಿದ್ದಾಳೆ.

ಯುವತಿಯ ದೂರು ಆಲಿಸಿದ SP ಠಾಣೆಗೆ ಆಗಮಿಸಿ ಮುಖ್ಯಸ್ಥನನ್ನು ಬಿಡುಗಡೆಗೊಳಿಸಿದ್ದಾರೆ. ಅಲ್ಲದೇ ಠಾಣಾಧಿಕಾರಿ ನೀಡುತ್ತಿದ್ದ ಕಿರುಕುಳದ ಕುರಿತಾಗಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ಕೃಪೆ: ಲೈವ್ ಇಂಡಿಯಾ