ಗಾಂಜಾಮತ್ತಲ್ಲಿ ಅಕ್ಸಿಡೆಂಟ್​​ ಮಾಡಿ ಪುಂಡಾಟ ನಡೆಸಿದ್ದ ಗೀತವಿಷ್ಣುಗೆ ಸಿಸಿಬಿ ಪೊಲೀಸರು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.  ಇತ್ತ ಮಲ್ಯಾ ಆಸ್ಪತ್ರೆ ಸಿಬ್ಬಂದಿಗೂ ಗಾಂಜಾ ಕೇಸ್ ಬಿಸಿ ತಟ್ಟಿದೆ. ಮತ್ತೊಂದೆಡೆ ಡೈನಾಮಿಕ್ ಸ್ಟಾರ್  ಕೂಡ  ಹಿರಿಯ ಪೊಲೀಸ್​ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ಬೆಂಗಳೂರು (ಅ.07): ಗಾಂಜಾಮತ್ತಲ್ಲಿ ಅಕ್ಸಿಡೆಂಟ್​​ ಮಾಡಿ ಪುಂಡಾಟ ನಡೆಸಿದ್ದ ಗೀತವಿಷ್ಣುಗೆ ಸಿಸಿಬಿ ಪೊಲೀಸರು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಇತ್ತ ಮಲ್ಯಾ ಆಸ್ಪತ್ರೆ ಸಿಬ್ಬಂದಿಗೂ ಗಾಂಜಾ ಕೇಸ್ ಬಿಸಿ ತಟ್ಟಿದೆ. ಮತ್ತೊಂದೆಡೆ ಡೈನಾಮಿಕ್ ಸ್ಟಾರ್ ಕೂಡ ಹಿರಿಯ ಪೊಲೀಸ್​ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ಗಾಂಜಾಮತ್ತಲ್ಲಿ ಕಾನೂನಿಗೆ ಕಿಂಚಿತ್ತು ಬೆಲೆಕೊಡದೇ ಪುಂಡಾಟ ನಡೆಸಿದ್ದ ಗೀತವಿಷ್ಣುಗೆ ಸಿಸಿಬಿ ಪೊಲೀಸರು ಚುರುಕುಮುಟ್ಟಿಸುತ್ತಿದ್ದಾರೆ. ಪೊಲೀಸರು ತಮ್ಮದೇ ವರಸೆಯಲ್ಲಿ ತನಿಖೆ ಆರಂಭಿಸುತ್ತಿದ್ದಂತೆ ಅಕ್ಸಿಡೆಂಟ್​ ದಿನ ಯಾರೆಲ್ಲಾ ತನ್ನ ಜೊತೆಗಿದ್ರು, ಮಲ್ಯ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಸಹಕಾರ ನೀಡಿದವರ ಹೆಸರನ್ನೂ ಗೀತವಿಷ್ಣು ಬಾಯ್ಬಿಟ್ಟಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಇನ್ನೂ ಮಲ್ಯ ಆಸ್ಪತ್ರೆ ಸಿಬ್ಬಂದಿಯನ್ನೂ ವಿಚಾರಣೆಗೊಳಪಡಿಸಲಾಗಿದ್ದು, ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಗೀತವಿಷ್ಣು ತಾಯಿ ತೇಜಸ್ವಿನಿ ಹಾಗೂ ತಂದೆ ಶ್ರೀನಿವಾಸ್​​ ಮೂರ್ತಿ ಸಹಕಾರ ನೀಡಿದ್ದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ. ಜೊತೆಗೆ ತಪ್ಪಿಸಿಕೊಂಡ ನಂತರ ವಿಷ್ಣು ಅಕ್ಕ ತೇಜಸ್ವಿನಿ ಸಹಕಾರ ನೀಡಿದ್ದರು ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ಕುಟುಂಬವನ್ನೇ ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದು ಈಗಾಗಲೇ ಸಹೋದರ ಆದಿನಾರಯಣ್​ಗೆ ನೋಟಿಸ್​ ನೀಡಿದ್ದಾರೆ.

ಅಪಘಾತ ಸಂದರ್ಭದಲ್ಲಿ ಗೀತವಿಷ್ಣು ಜೊತೆ ಕಾಣಿಸಿಕೊಂಡಿದ್ದ ನಟ ದೇವೃಆಜ್ ಪುತ್ರ ಪ್ರಣಾಮ್​ ನನ್ನು ಸತತ ಮೂರನೇ ದಿನ ವಿಚಾರಣೆಗೆ ಒಳಪಡಿಸಲಾಯ್ತು.. ಈ ಮಧ್ಯೆ ಪದೇ ಪದೇ ಮಗನ ವಿಚಾರಣೆಯಿಂದ ಬೇಸತ್ತ ನಟ ದೇವರಾಜ್​ ಸಿಸಿಬಿ ಜಂಟಿ ಆಯುಕ್ತ ಸತೀಶ್​ ಕುಮಾರ್​ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡ್ರು. ಆದ್ರೆ, ಪ್ರಣಾಮ್​ನನ್ನು ಬಂಧಿಸುವುದಿಲ್ಲ ಎಂದು ಜಂಟಿ ಆಯುಕ್ತರು ದೇವರಾಜ್ ಸಮಾಧಾನಪಡಿಸಿ ಕಳುಹಿಸಿದ್ದಾರೆ. ಇನ್ನೂ ಗೀತವಿಷ್ಣು ಗನ್​ ಮ್ಯಾನ್​ ಆನಂದ್​ ತಪ್ಪಿಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಒಟ್ಟಾರೆ, ಹಣದ ಅಮಲಿನಲ್ಲಿ ಕಾನೂನಿನ ಬಗ್ಗೆ ಅಗೌರವ ತೋರಿದವರಿಗೆ ಪೊಲೀಸರು ಕಾನೂನಿನ ಚುರುಕು ಮುಟ್ಟಿಸಲು ಪಣ ತೊಟ್ಟಿದ್ದಾರೆ.