ಲೇಡಿಸ್ ಬಾರ್ ಹೆಸರಲ್ಲಿ ಲೈವ್ ಬ್ಯಾಂಡ್ ದಂಧೆಯ ಕರಾಳ ಚಿತ್ರಣವನ್ನು ಸುವರ್ಣನ್ಯೂಸ್ ಬಯಲಿಗೆ ಎಳೆದ ಬೆನ್ನಲ್ಲೇ ಸಾಕಷ್ಟು ಬೆಳವಣಿಗೆಗಳು ನಡೆದಿದೆ.ಸುದ್ದಿ ಪ್ರಸಾರ ಆಗುತ್ತಿದ್ದಂತೆ ದಂಧೆಯ ಪಬ್'ಗಳೆಲ್ಲಾ ಬಾಗಿಲು ಮುಚ್ಚಿ ಮನೆ ಕಡೆ ಹೆಜ್ಜೆ ಹಾಕಿದರೆ ಇತ್ತ ಕಮಿಷನರ್ ಸುನೀಲ್ ಕುಮಾರ್ ತುರ್ತು ಸಭೆ ಕರೆದರು.
ಬೆಂಗಳೂರು (ನ.21): ಲೇಡಿಸ್ ಬಾರ್ ಹೆಸರಲ್ಲಿ ಲೈವ್ ಬ್ಯಾಂಡ್ ದಂಧೆಯ ಕರಾಳ ಚಿತ್ರಣವನ್ನು ಸುವರ್ಣನ್ಯೂಸ್ ಬಯಲಿಗೆ ಎಳೆದ ಬೆನ್ನಲ್ಲೇ ಸಾಕಷ್ಟು ಬೆಳವಣಿಗೆಗಳು ನಡೆದಿದೆ.ಸುದ್ದಿ ಪ್ರಸಾರ ಆಗುತ್ತಿದ್ದಂತೆ ದಂಧೆಯ ಪಬ್'ಗಳೆಲ್ಲಾ ಬಾಗಿಲು ಮುಚ್ಚಿ ಮನೆ ಕಡೆ ಹೆಜ್ಜೆ ಹಾಕಿದರೆ ಇತ್ತ ಕಮಿಷನರ್ ಸುನೀಲ್ ಕುಮಾರ್ ತುರ್ತು ಸಭೆ ಕರೆದರು.
ಸುವರ್ಣನ್ಯೂಸ್ ಎಕ್ಲೂಸಿವ್ ಸ್ಟಿಂಗ್ ಆಪರೇಶನ್ 'ರಿಂಗ... ರಿಂಗಾ ವರದಿ ನಿನ್ನೆ ಸಂಜೆ 7 ಕ್ಕೆ ಪ್ರಸಾರವಾಗುತ್ತಲೇ ದಂಧೆಗಳು ನಡೆಯುತ್ತಿದ್ದ ಏರಿಯಾದಲ್ಲಿನ ಠಾಣೆಗಳ ಫೋನ್ಗಳು ಕೂಡ ರಿಂಗಣಿಸಲಾರಂಭಿಸಿದವು. ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆಯ ವರದಿಯಲ್ಲಿ ಬಿತ್ತರವಾಗಿದ್ದ ಅಷ್ಟೂ ಪಬ್'ಗಳು ಕ್ಲೋಸ್ ಆಗಿಬಿಟ್ಟವು. ಮೊದಲಿಗೆ ಸ್ಟಿಂಗ್ ಆಪರೇಷನ್'ನ ವರದಿ ಪ್ರಸಾರ ಆಗುತ್ತಿದ್ದಂತೆ ರಿಧಮ್ ಬಾರ್ ಆಂಡ್ ರೆಸ್ಟೋರೆಂಟ್ ಮೇಲೆ ಸಂಪಂಗಿ ರಾಮನಗರ ಪೊಲೀಸರು ಧಿಡೀರ್ ದಾಳಿ ನಡೆಸಿದರು. ಇಷ್ಟು ಆಗುತ್ತಿದ್ದಂತೆ ಬ್ರಿಗೇಡ್ ರಸ್ತೆಯ ಬ್ರಿಗೇಡ್ ಡ್ರೀಮ್ಸ್ , ಎಂಜಿ ರಸ್ತೆಯ ನಕ್ಷತ್ರ ಪಬ್ ಧಿಡೀರ್ ಕ್ಲೋಸ್ ಮಾಡಿದವು.
ತುರ್ತು ಅಧಿಕಾರಿಗಳ ಸಭೆ ಕರೆದ ಪೊಲೀಸ್ ಆಯುಕ್ತರು
ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆ ಪ್ರಸಾರ ಆಗುತ್ತಿದ್ದಂತೆ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಆವ್ರ ಜೊತೆ ತುರ್ತು ಸಭೆಯನ್ನು ನಡೆಸಿದರು. ಅಕ್ರಮವಾಗಿ ನಡೆಯುತ್ತಿರುವ ಲೈವ್ ಬ್ಯಾಂಡ್ ವಿರುದ್ಧ ಕ್ರಮಕ್ಕೆ ತಾಕೀತು ಮಾಡಿದರು. ಲೇಡಿಸ್ ಬಾರ್ ಹೆಸರಲ್ಲಿ ಲೈವ್' ಬ್ಯಾಂಡ್ ನಡೆಸುತ್ತಿರುವವರ ವಿರುದ್ಧ ಸುವರ್ಣನ್ಯೂಸ್ ಸಮರ ಪೊಲೀಸ್ ವಲಯದಲ್ಲೇ ಹೊಸ ಸಂಚಲನ ಮೂಡಿಸಿದೆ.
