Asianet Suvarna News Asianet Suvarna News

ಫೇಸ್ಬುಕ್’ನಲ್ಲಿ ಮಲ್ಲಿಕಾ ಘಂಟಿ ಅವಹೇಳನ; ಹಂಪಿ ಕನ್ನಡ ವಿವಿ ಅಧೀಕ್ಷಕನ ಬಂಧನ

ಕುಲಪತಿ ಆಗಿರುವ ಮಲ್ಲಿಕಾ ಘಂಟಿಯವರಿಗೆ ಅಕ್ಕಮಹಾದೇವಿ ಪ್ರಶಸ್ತಿ ನೀಡಲಾಗಿತ್ತು. ಆದರೆ, ಈ ಪ್ರಶಸ್ತಿ ನೀಡಿದ್ದಕ್ಕೆ ವಿವಿ ಅಧೀಕ್ಷಕ ಸೋಮನಾಥ್, ಸಾಮಾಜಿಕ ಜಾಲತಾಣತಲ್ಲಿ ಟೀಕಿಸಿದ್ದರು.

Police Arrest University Staff for maligning VC
  • Facebook
  • Twitter
  • Whatsapp

ಹಂಪಿ (ಮೇ.13): ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿ ವಿರುದ್ಧ ಫೇಸ್ಬುಕ್’ನಲ್ಲಿ ಅವಹೇಳನಕಾರಿ ಹೇಳಿಕೆ ಹಾಕಿರುವ ಆರೋಪದ ಮೇಲೆ, ವಿವಿ ಅಧೀಕ್ಷಕ ಹೆಚ್.ಎಂ.ಸೋಮನಾಥ್’ರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಕುಲಪತಿ ಆಗಿರುವ ಮಲ್ಲಿಕಾ ಘಂಟಿಯವರಿಗೆ ಅಕ್ಕಮಹಾದೇವಿ ಪ್ರಶಸ್ತಿ ನೀಡಲಾಗಿತ್ತು. ಆದರೆ, ಈ ಪ್ರಶಸ್ತಿ ನೀಡಿದ್ದಕ್ಕೆ ವಿವಿ ಅಧೀಕ್ಷಕ ಸೋಮನಾಥ್, ಸಾಮಾಜಿಕ ಜಾಲತಾಣತಲ್ಲಿ ಟೀಕಿಸಿದ್ದರು.

ಅಕ್ಕಮಹಾದೇವಿ ಪ್ರಶಸ್ತಿ ಯಾರಿಗಾಗಿ ಸೃಷ್ಟಿಸಲಾಯ್ತೋ, ಅವರಿಗೆ ದಕ್ಕಿದೆ ಎಂದು ಬರೆದಿದ್ದರು. ಈ ಬಗ್ಗೆ  ಮಲ್ಲಿಕಾಗಂಟಿ ಕಮಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೋಲೀಸರು ಸೋಮನಾಥ್’ರನ್ನು  ಹೊಸಪೇಟೆಯ ಅವರ ನಿವಾಸದಲ್ಲಿಯೇ ಬಂಧಿಸಿದ್ದಾರೆ.

Follow Us:
Download App:
  • android
  • ios