ಅಮೆರಿಕಾದಲ್ಲಿ ನೆಲಸಿರುವ ಬಲಬೀರ್ ಇತ್ತಿಚೆಗೆ ಹುಬ್ಬಳ್ಳಿ'ಗೆ ಆಗಮಿಸಿ ಸೋಲಾರ್ ವ್ಯಾಪಾರ ನಡೆಸುತ್ತಿದ್ದಾರೆ. ಈತನ ಬಗ್ಗೆ ಮಾಹಿತಿ ಸಂಗ್ರಹಿಸಿದ ಯುವತಿ ಹಾಗೂ ಆಕೆಯ ಪ್ರಿಯಕರ ರಮೇಶ್ ಹಜಾರೆ ಹನಿ ಟ್ರ್ಯಾಪ್'ಗೆ ಪ್ಲಾನ್ ಮಾಡ್ತಾರೆ.

ಹುಬ್ಬಳ್ಳಿ(ಆ.04): ಅನಿವಾಸಿ ಭಾರತೀಯನೊಬ್ಬನನ್ನು ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಸಿ ಹಣ ದೋಚಿದ್ದ ಯುವತಿ ಸೇರಿದಂತೆ ನಾಲ್ವರು ಖತರ್'ನಾಕ್ ಜಾಲವನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಯುವತಿ, ಆಕೆಯ ಪ್ರಿಯಕರ ರಮೇಶ್ ಹಜಾರೆ, ವಿನಾಯಕ ಹಜಾರೆ ಹಾಗೂ ಗಣೇಶ್ ಶೆಟ್ಟಿ ಬಂಧಿತರು.

ಹಲ್ಲೆಗೊಳಗಾದ ಎನ್'ಆರ್'ಐ ಪ್ರಜೆ ಬಲಬೀರ್' ಎಂಬುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಅಮೆರಿಕಾದಲ್ಲಿ ನೆಲಸಿರುವ ಬಲಬೀರ್ ಇತ್ತಿಚೆಗೆ ಹುಬ್ಬಳ್ಳಿ'ಗೆ ಆಗಮಿಸಿ ಸೋಲಾರ್ ವ್ಯಾಪಾರ ನಡೆಸುತ್ತಿದ್ದಾರೆ. ಈತನ ಬಗ್ಗೆ ಮಾಹಿತಿ ಸಂಗ್ರಹಿಸಿದ ಯುವತಿ ಹಾಗೂ ಆಕೆಯ ಪ್ರಿಯಕರ ರಮೇಶ್ ಹಜಾರೆ ಹನಿ ಟ್ರ್ಯಾಪ್'ಗೆ ಪ್ಲಾನ್ ಮಾಡ್ತಾರೆ. ಹಾಡುಗಾರ್ತಿ ಯಾಗಿರುವ ಪ್ರೀಯಾ ಬಲಬೀರ್ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸುತ್ತಾರೆ. ಬಳಿಕ ಬಲಬೀರ್'ನನ್ನು ಖೆಡ್ಡಕ್ಕೆ ಕೆಡವಲು ಪ್ಲಾನ್ ಮಾಡ್ತಾರೆ. ಜುಲೈ 31 ರಂದು ಯುವತಿ ಬಲಬೀರ್'ನನ್ನು ಆತನ ಕಾರಿನಲ್ಲಿ ಹುಬ್ಬಳ್ಳಿ'ಯ ಹೊರವಲಯದ ಅಂಚಟಗೇರಿ ಕಡೆ ಕರೆದುಕೊಂಡು ಹೋಗ್ತಾಳೆ.

ಈ ವೇಳೆ ಇಬ್ಬರು ಏಕಾಂತದಲ್ಲಿ ಇದ್ದಾಗ ಯುವತಿ ಪ್ರಿಯಕರ ರಮೇಶ್ ಹಾಗೂ ಆತನ ಸಹೋದರ ವಿನಾಯಕ್ ಹಾಜರೆ, ಆತನ ಸ್ನೇಹಿತ ಗಣೇಶ ಶೆಟ್ಟಿ  ಬಲಬೀರ್ ಮೇಲೆ ದಾಳಿ ನಡೆಸಿ ಆತನ ‌ಬಳಿ ಇದ್ದ ಎಟಿಎಂ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನ ದೋಚಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಲಬೀರ್'ನನ್ನ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಲಬೀರ್ ಅವರಿಂದ ದೋಚಿದ ಎಟಿಎಂ ಹಾಗೂ ಕ್ರೆಡಿಟ್ ಕಾರ್ಡ್ ಬಳಿಸಿ‌ ನಾಲ್ವರು 40 ಸಾವಿರ ಹಣ ಡ್ರಾ ಮಾಡಿದ್ದಾರೆ.