ರಾಮಕೃಷ್ಣಾಶ್ರಮ ಬೆಳ್ಳಿ ಹಬ್ಬ; ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ

news | Sunday, March 4th, 2018
Suvarna Web Desk
Highlights

ಇಲ್ಲಿನ ರಾಮಕೃಷ್ಣ ಆಶ್ರಮಕ್ಕೆ 25 ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್’ನಲ್ಲಿ ಮಾತನಾಡಿದ್ದಾರೆ.   ಶತಾಯುಶಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗೆ ಪ್ರಣಾಮಗಳು ಎನ್ನುವ ಮೂಲಕ ಭಾಷಣ ಆರಂಭಿಸಿದ್ದಾರೆ.  

ತುಮಕೂರು (ಮಾ. 04): ಇಲ್ಲಿನ ರಾಮಕೃಷ್ಣ ಆಶ್ರಮಕ್ಕೆ 25 ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್’ನಲ್ಲಿ ಮಾತನಾಡಿದ್ದಾರೆ.   ಶತಾಯುಶಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗೆ ಪ್ರಣಾಮಗಳು ಎನ್ನುವ ಮೂಲಕ ಭಾಷಣ ಆರಂಭಿಸಿದ್ದಾರೆ.  

ಪ್ರೀತಿಯ ಸೋದರ ಸಹೋದರಿಯರಿಗೆ ಆತ್ಮೀಯ ಸ್ವಾಗತ ಎಂದು ಮಾತು ಆರಂಭಿಸಿದ್ದಾರೆ. ಹಿಂದೊಮ್ಮೆ  ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆಯಲು ಬಂದಿದ್ದೆ. ರಾಷ್ಟ್ರ‌ ನಿರ್ಮಾಣದಲ್ಲಿ ಶಿವಕುಮಾರ ಸ್ವಾಮೀಜಿ  ಸಮರ್ಪಣೆ ಮಾಡಿದ್ದಾರೆ. ಅವರ ಜೊತೆಗಿದ್ದ ಅನುಭವ ಮರೆಯುವಂತಿಲ್ಲ. ಅವರ ದೀರ್ಘಾಯುಷ್ಯಕ್ಕಾಗಿ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಇಂದು ತುಮಕೂರಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಸಂತಸದ ವಿಚಾರ. ಇವತ್ತಿನ ಕಾರ್ಯಕ್ರಮದ ಕೇಂದ್ರ ಬಿಂದು ಸ್ವಾಮೀಜಿ ವಿವೇಕಾನಂದರು. ಕರ್ನಾಟಕಕ್ಕೂ ವಿವೇಕಾನಂದರಿಗೂ ಸಂಬಂಧವಿದೆ. ಸಾಧು ಭಕ್ತರ ಸಮ್ಮೇಳನ ಖುಷಿ ತಂದಿದೆ. ಧಾರ್ಮಿಕ ಮತ್ತು ವಿಜ್ಞಾನದ ಅರಿವು ಒಂದೇ  ಸಿಗುವ ಕಾರ್ಯಕ್ರಮ ಇದಾಗಿದೆ ಎಂದು ಶ್ಲಾಘಿಸಿದ್ದಾರೆ. 

ನಿನ್ನೆ ಹೊರಬಿದ್ದ ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ ರಾಜ್ಯದ ಚುನಾವಣಾ ಫಲಿತಾಂತ ಐತಿಹಾಸಿಕವಾದದ್ದು. ಅಲ್ಲಿನ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದೆ. ತ್ರಿಪುರ ಎಡಪಂಥೀಯರ  ಅಭೇಧ್ಯ ಕೋಟೆ ಎನ್ನಲಾಗುತ್ತಿತ್ತು.  ಆ ಕೋಟೆಯನ್ನು ಯುವಶಕ್ತಿ, ನಾರಿ ಶಕ್ತಿ ಜತೆಗೂಡಿ ಧೂಳೀಪಟಗೊಳಿಸಿದರು.  ಬಿಜೆಪಿ ನೇತೃತ್ವದಲ್ಲಿ ದೇಶದ ಯುವ ಸರ್ಕಾರ ನಿರ್ಮಾಣವಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ. 

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಯುವ ಶಾಸಕರೇ ಗೆದ್ದಿದ್ದಾರೆ.  ಈ ರಾಜ್ಯದ 20 ಸ್ಥಾಗಳಲ್ಲಿ ನನ್ನ ಆದಿವಾಸಿ ಸೋದರ, ಸೋದರಿಯರೇ ಅಧಿಕ ಸಂಖ್ಯೆಯಲ್ಲಿದ್ದರು. ತ್ರಿಪುರಾದ ಯುವ ಜನಾಂಗ ಭಯ, ಭ್ರಷ್ಟಾಚಾರ, ಸೇಡು, ವೈಷಮ್ಯದ ರಾಜಕೀಯವನ್ನು ಪರಾಭವಗೊಳಿಸಿದ್ದಾರೆ.  ಯುವ ಸಂಕಲ್ಪದ ಈ ಪ್ರವಾಹ ಮುಂದೆ ಕರ್ನಾಟಕದಲ್ಲೂ ಹರಿಯಲಿದೆ ಎಂದು ಮೋದಿ ಹೇಳಿದ್ದಾರೆ. 

Comments 0
Add Comment

    Suresh Gowda Reaction about Viral Video

    video | Friday, April 13th, 2018
    Suvarna Web Desk