ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 42ನೇ ಆವೃತ್ತಿಯ ಮನ್ ಕಿ ಬಾತ್ ನಡೆಸಿಕೊಟ್ಟಿದ್ದಾರೆ. ಈ ವೇಳೆ ಅನೇಕ ರೀತಿಯಾದ ವಿಚಾರಗಳನ್ನು ಹಂಚಿಕೊಂಡಿದ್ದು, ಯೋಗದ ಬಗ್ಗೆಯೂ ಕೂಡ ಅವರು ಮಾತನಾಡಿದ್ದಾರೆ.

ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 42ನೇ ಆವೃತ್ತಿಯ ಮನ್ ಕಿ ಬಾತ್ ನಡೆಸಿಕೊಟ್ಟಿದ್ದಾರೆ. ಈ ವೇಳೆ ಅನೇಕ ರೀತಿಯಾದ ವಿಚಾರಗಳನ್ನು ಹಂಚಿಕೊಂಡಿದ್ದು, ಯೋಗದ ಬಗ್ಗೆಯೂ ಕೂಡ ಅವರು ಮಾತನಾಡಿದ್ದಾರೆ.

ಅಲ್ಲದೇ ತಾವು ಯೋಗ ಶಿಕ್ಷಕರಲ್ಲ ಜನರೇ ತಮ್ಮನ್ನು ಯೋಗ ಶಿಕ್ಷಕರನ್ನಾಗಿ ಮಾಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಪ್ರಧಾನಿ ಅವರು ಯೋಗ ಮಾಡುತ್ತಿರುವ 3ಡಿ ಅನಿಮೇಷನ್ ವಿಡಿಯೋ ಒಂದು ಕೂಡ ಬಿಡುಗಡೆಯಾಗಿದೆ.

ತ್ರಿಕೋನಾಸನವನ್ನು ಪ್ರಧಾನಿ ಅವರು ಮಾಡುತ್ತಿರುವ ಅನಿಮೇಷನ್ ವಿಡಿಯೋದಲ್ಲಿ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಸಲಾಗಿದೆ.

Scroll to load tweet…