ರಾಂಚಿ[ಜೂ. 20] ಈಗಾಗಲೇ ರಾಂಚಿ ತಲುಪಿರುವ ಪ್ರಧಾನಿ ನರೇಂದ್ರ ಮೋದು ಜೂನ್ 21 ರಂದು ಬೆಳಗ್ಗೆ 6 ಗಂಟೆಗೆ ಯೋಗ ಮಾಡಲಿದ್ದಾರೆ. ಜಾರ್ಖಂಡ್‌ನ ರಾಂಚಿಯಲ್ಲಿ ಶುಕ್ರವಾರ ಸುಮಾರು 40 ಸಾವಿರ ಜನರ ಜತೆ ಯೋಗ ಮಾಡಲಿದ್ದಾರೆ.

ಈ ಸಲದ ಯೋಗ ದಿನಾಚರಣೆ ನಡೆಯಲಿರುವ ಪ್ರಭಾತ್‌ ಮೈದಾನಕ್ಕೆ ನಸುಕಿನ 3 ಗಂಟೆಯಿಂದಲೇ ಯೋಗಾಸಕ್ತರಿಗೆಆಗಮಿಸಲು ಅವಕಾಶ ಕಲ್ಪಿಸಲಾಗಿದೆ. ಜಾರ್ಖಂಡ್‌ ರಾಜ್ಯಪಾಲರಾದ ದ್ರೌಪದಿ ಮುರ್ಮು, ಕೇಂದ್ರ ಆಯುಷ್‌ ಸಚಿವ ಶ್ರೀಪಾದ್‌ ಯೆಸ್ಸೊ ನಾಯಕ್‌, ರಾಜ್ಯ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಇರಲಿದ್ದಾರೆ.

ಯೋಗಕ್ಕೆ ಮೋದಿ ವಿಶ್ವಮಾನ್ಯತೆ ಕೊಡಿಸಿದ್ದು ಹೇಗೆ?

ಯೋಗ ದಿನಕ್ಕೆ ಈ ಬಾರಿ 'ಯೋಗ ಫಾರ್‌ ಕ್ಲೈಮೇಟ್‌ ಆ್ಯಕ್ಷನ್‌' ಎಂಬ ಘೋಷವಾಕ್ಯ ಸಿದ್ಧಪಡಿಸಲಾಗಿದೆ.  ಟ್ವೀಟ್ ಮಾಡಿರುವ ಮೋದಿ  ಯೋಗವನ್ನು ನಿಮ್ಮ ಜೀವನದ ಅವಿಭಾಜ್ಯ ಸಂಪತ್ತನ್ನಾಗಿ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಕರೆ ನೀಡಿದ್ದಾರೆ.