ಆರಂಭಿಕ ಮತದಾನದ ಪ್ರಕಾರ ಮೋದಿ ಪರವಾಗಿ ಶೇ. 21 ಮತದಾನವಾಗಿದೆ.

ನವದೆಹಲಿ(ನ.29): ಪ್ರತಿಷ್ಠಿತ ಟೈಮ್ಸ್ ಮ್ಯಾಗಜಿನ್‌ನ ‘ವರ್ಷದ ವ್ಯಕ್ತಿ-2016’ಕ್ಕೆ ಓದುಗರ ಆನ್‌ಲೈನ್ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನೂ ಹಿಂದಿಕ್ಕಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಮೋದಿಯವರಿಗಿಂತ ಹಿಂದಿದ್ದಾರೆ. ಟೈಮ್ಸ್ ‘ವರ್ಷದ ವ್ಯಕ್ತಿ’ ಗೌರವದ ಆಯ್ಕೆಗೆ ನಡೆಯುವ ಮತದಾನದಲ್ಲಿ ಪ್ರಧಾನಿ ಮೋದಿಯವರು ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧೆಯಲ್ಲಿದ್ದಾರೆ. ಒಳ್ಳೆಯ ಅಥವಾ ಕೆಟ್ಟ ವಿಷಯಕ್ಕಾಗಿ ಕಳೆದ ವರ್ಷದಲ್ಲಿ ನಮ್ಮ ಜಗತ್ತಿನ ಮೇಲೆ ಪ್ರಭಾವ ಬೀರಿರುವ ವ್ಯಕ್ತಿಗಳನ್ನು ‘ವರ್ಷದ ವ್ಯಕ್ತಿ’ ಎಂದು ಓದುಗರ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ವರ್ಷ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ‘ವರ್ಷದ ವ್ಯಕ್ತಿ’ಯಾಗಿ ಆಯ್ಕೆಯಾಗಿದ್ದರು. ಪ್ರತಿ ವರ್ಷ ತಮ್ಮ ಓದುಗರಲ್ಲಿ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡಲು ಆನ್‌ಲೈನ್ ಮತದಾನಕ್ಕೆ ಪತ್ರಿಕೆ ಮನವಿ ಮಾಡುತ್ತದೆ. ಓದುಗರ

ಆರಂಭಿಕ ಮತದಾನದ ಪ್ರಕಾರ ಮೋದಿ ಪರವಾಗಿ ಶೇ. 21 ಮತದಾನವಾಗಿದೆ. ಒಂದು ಕ್ಷಣ ವಿಕಿಲೀಕ್ಸ್ ಸಂಸ್ಥಾಪಕ ಜುಲಿಯಾನ್ ಅಸ್ಸಾಂಜ್ ಟ್ರಂಪ್‌ರನ್ನು ಹಿಂದಿಕ್ಕಿದ್ದರು. ಓದುಗರ ಮತದಾನ ಡಿ. 4ರಂದು ಕೊನೆಗೊಳ್ಳುತ್ತದೆ.