ಯಾರೂ ಗೆಲ್ಲಲ್ಲ, ಯಾರೂ ಸೋಲಲ್ಲ: ಸಾಮರಸ್ಯ ಕಾಪಾಡೋಣ ಎಂದ ಮೋದಿ!
ಐತಿಹಾಸಿಕ ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ/ ಬೆಳಗ್ಗೆ 10-30ಗೆ ತೀರ್ಪು ಪ್ರಕಟಿಸಲಿರುವ ಸುಪ್ರೀಂಕೋರ್ಟ್/ ತೀರ್ಪಿನ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಟ್ವಿಟ್ ಮಾಡಿರುವ ಪ್ರಧಾನಿ ಮೋದಿ/ತೀರ್ಪನ್ನು ಗೆಲುವು, ಸೋಲಿನ ಅಳತೆಯಲ್ಲಿ ತೂಗಬಾರದು ಎಂದು ಮನವಿ ಮಾಡಿದ ಪ್ರಧಾನಿ/ ತೀರ್ಪು ಯಾರ ಪರವಾಗಿ ಬಂದರೂ ಅದು ದೇಶದ ಗೆಲುವು ಎಂದ ಮೋದಿ/ ಸಾಮಾಜಿಕ ಸಾಮರಸ್ಯ ಕಾಪಾಡುವಂತೆ ದೇಶದ ಜನರಲ್ಲಿ ಮನವಿ ಮಾಡಿದ ಪ್ರಧಾನಿ/ ಸಮಾಜದ ಸಾಮರಸ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದ ಮೋದಿ/
ನವದೆಹಲಿ(ನ.09): ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ ಶುರುವಾಗಿದೆ. ಸುಪ್ರೀಂಕೋರ್ಟ್ ಬೆಳಗ್ಗೆ 10-30ಕ್ಕೆ ತೀರ್ಪು ಪ್ರಕಟಿಸಲಿದೆ. ಇನ್ನು ತೀರ್ಪಿಗೂ ಮುನ್ನ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ, ತೀರ್ಪನ್ನು ಗೆಲುವು, ಸೋಲಿನ ಅಳತೆಯಲ್ಲಿ ತೂಗಬಾರದು ಎಂದು ಮನವಿ ಮಾಡಿದ್ದಾರೆ.
ತೀರ್ಪು ಯಾರ ಪರವಾಗಿ ಬಂದರೂ ಅದು ದೇಶದ ಗೆಲುವು ಎಂದಿರುವ ಪ್ರಧಾನಿ ಮೋದಿ, ಸಾಮರಸ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಅಯೋಧ್ಯೆ ತೀರ್ಪು ಸ್ವಾಗತಿಸಲು ರಾಷ್ಟ್ರ ರಾಜಧಾನಿ ಸಜ್ಜು
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಪ್ರಧಾನಿ, ತೀರ್ಪಿನಿಂದಾಗಿ ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಯೋಧ್ಯೆ ತೀರ್ಪು: ವಿವಾದ ಇರುವುದೇ 2.77 ಎಕರೆ ಭೂಮಿಗಾಗಿ!
ಸಮಾಜದ ಸಾಮರಸ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಸಹಬಾಳ್ವೆಯ ಸಿದ್ಧಾಂತಕ್ಕೆ ಧಕ್ಕೆ ಬರುವುದಿಲ್ಲ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆ ಐತಿಹಾಸಿಕ ತೀರ್ಪು : ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ