Asianet Suvarna News Asianet Suvarna News

ಸೋನಿಯಾ ಗಾಂಧಿ ಕ್ಷೇತ್ರಕ್ಕೆ ಇಂದು ಮೋದಿ ಮೊದಲ ಭೇಟಿ

ನೆಹರು- ಗಾಂಧಿ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರವಾಗಿರುವ ಉತ್ತರಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಮೊದಲ ಬಾರಿ ಭೇಟಿ ನೀಡಲಿದ್ದಾರೆ.

PM Modi to visit Sonia Gandhi s constituency Raebareli today
Author
Raebareli, First Published Dec 16, 2018, 8:04 AM IST

ಲಖನೌ[ಡಿ.16]: ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ಹಾಗೂ ನೆಹರು- ಗಾಂಧಿ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರವಾಗಿರುವ ಉತ್ತರಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿರುವುದು ಸಂಚಲನಕ್ಕೆ ಕಾರಣವಾಗಿದೆ.

ರಾಯ್‌ಬರೇಲಿ ಕ್ಷೇತ್ರದಲ್ಲಿ 1100 ಕೋಟಿ ರು. ವೆಚ್ಚದ ವಿವಿಧ ಯೋಜನೆಗಳಿಗೆ ಮೋದಿ ಅವರು ಭಾನುವಾರ ಚಾಲನೆ ನೀಡಲಿದ್ದಾರೆ. ಹಮ್‌ಸಫರ್‌ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರನ್ನು ಆಯಾ ಕ್ಷೇತ್ರಗಳಲ್ಲೇ ಕಟ್ಟಿಹಾಕುವ ತಂತ್ರದ ಭಾಗವಾಗಿ ಮೋದಿ ಅವರು ರಾಯ್‌ಬರೇಲಿಗೆ ಭೇಟಿ ನೀಡುತ್ತಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ, ಮುಂದಿನ ವರ್ಷಾರಂಭದಲ್ಲಿ ಕುಂಭಮೇಳ ನಡೆಯಲಿರುವ ಅಲಹಾಬಾದ್‌ಗೂ ಮೋದಿ ಭಾನುವಾರ ಭೇಟಿ ಕೊಡಲಿದ್ದಾರೆ.

2014ರ ಚುನಾವಣೆಯಲ್ಲಿ ರಾಯ್‌ಬರೇಲಿಯಿಂದ ಪುನರಾಯ್ಕೆಯಾಗಿದ್ದ ಸೋನಿಯಾ, ಕಳೆದ ಏಪ್ರಿಲ್‌ ಬಳಿಕ ಕ್ಷೇತ್ರಕ್ಕೆ ಬಂದೇ ಇಲ್ಲ. ಅದಕ್ಕೂ ಮುನ್ನ 2016ರ ಮಧ್ಯಭಾಗದಲ್ಲಿ ಒಮ್ಮೆ ಆಗಮಿಸಿದ್ದರು. 2017ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ನಿಮಿತ್ತ ವಾರಾಣಸಿಯಲ್ಲಿ ರೋಡ್‌ ಶೋ ನಡೆಸುವ ವೇಳೆ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಪ್ರಚಾರಕ್ಕೂ ಆಗಮಿಸಲಿಲ್ಲ. ವಿಶೇಷ ಎಂದರೆ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ತಮ್ಮ ಸಂಸದರ ನಿಧಿಯ ಹಣವನ್ನು ರಾಯ್‌ಬರೇಲಿ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಬಳಕೆ ಮಾಡಿದ್ದಾರೆ.

Follow Us:
Download App:
  • android
  • ios