ನವದೆಹಲಿ(ಫೆ.26): ಮಧ್ಯರಾತ್ರಿ ಪಾಕ್ ನೆಲದಲ್ಲಿರುವ ಉಗ್ರರ ಅಡಗುತಾಣದ ಮೇಲೆ ಭಾರತೀಯ ಸೇನೆ ದಾಳಿ ಮಾಡುತ್ತಿರುವುದನ್ನು ನೋಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಮಧ್ಯಾಹ್ನದ ವೇಳೆ ನವದೆಹಲಿಯಲ್ಲಿ ಮೆಟ್ರೋ ಸಂಚಾರ ಕೈಗೊಂಡರು.

ಇಲ್ಲಿನ ಖಾನ್ ಮಾರ್ಕೆಟ್ ಬಳಿ ಮೆಟ್ರೋ ಏರಿದ ಮೋದಿ, ಅಲ್ಲಿಂದ ಇಸ್ಕಾನ್ ಕಾರ್ಯಕ್ರಮಕ್ಕೆ ತೆರಳಿದರು. ಈ ವೇಳೆ ಮೆಟ್ರೋದಲ್ಲಿದ್ದ ಸಾರ್ವಜನಿಕರ ಕುಶಲೋಪರಿ ವಿಚಾರಿಸಿದ ಪ್ರಧಾನಿ, ಮಕ್ಕಳೊಂದಿಗೆ ಆಡಿ ನಲಿದರು.