ಬಿಯರಿಡ್ಜ್‌[ಆ.27]: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತಮವಾಗಿ ಇಂಗ್ಲಿಷ್‌ ಮಾತನಾಡುತ್ತಾರೆ. ಆದರೆ, ಅವರು ಇಂಗ್ಲಿಷ್‌ನಲ್ಲಿ ಮಾತನಾಡಲು ಬಯಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ ಘಟನೆ ಸೋಮವಾರ ನಡೆದಿದೆ.

ಕಾಶ್ಮೀರ, ಟ್ರಂಪ್ ಮಧ್ಯಸ್ಥಿಕೆ ಇಲ್ಲ: ಮೋದಿಗೆ ಜಯ, ಪಾಕ್‌ಗೆ ಮುಖಭಂಗ!

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಿ-7 ಶೃಂಗದ ವೇಳೆ ಸೋಮವಾರ ಉಭಯ ನಾಯಕರು ಭೇಟಿಯಾಗಿ ಸುಮಾರು 40 ನಿಮಿಷಗಳ ಕಾಲ ಔಪಚಾರಿಕ ಮಾತುಕತೆ ನಡೆಸಿದ್ದಾರೆ. ಭೇಟಿಗೂ ಮುನ್ನ ಆಯೋಜಿಸಿದ್ದ ಸುದ್ದಿಗೋಷ್ಠಿಯ ವೇಳೆ ಹಿಂದಿಯಲ್ಲಿ ಮಾತನಾಡಿದ ಮೋದಿ ನಾವಿಬ್ಬರೂ ಈಗ ಖಾಸಗಿಯಾಗಿ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.

ಪಾಕಿಸ್ತಾನಕ್ಕೆ ಬಿತ್ತು FATF ಪೆಟ್ಟು: ಕಪ್ಪುಪಟ್ಟಿಗೆ 'ಉಗ್ರಸ್ತಾನ'!

ಈ ವೇಳೆ ಮಧ್ಯ ಪ್ರವೇಶಿಸಿದ ಟ್ರಂಪ್‌, ‘ಮೋದಿ ನಿಜವಾಗಿ ಇಂಗ್ಲಿಷ್‌ನಲ್ಲಿ ಚೆನ್ನಾಗಿ ಮಾತನಾಡಬಲ್ಲರು ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ಮೋದಿ ಅವರು ಟ್ರಂಪ್‌ ಅವರ ಕೈಯನ್ನು ಬಲವಾಗಿ ತಟ್ಟುವ ಮೂಲಕ, ಜೋರಾಗಿ ನಕ್ಕರು.