ಪಾಕಿಸ್ತಾನಕ್ಕೆ ಬಿತ್ತು FATF ಪೆಟ್ಟು: ಕಪ್ಪುಪಟ್ಟಿಗೆ 'ಉಗ್ರಸ್ತಾನ'!
ಜಾಗತಿಕವಾಗಿ ಪಾಕಿಸ್ತಾನಕ್ಕೆ ಮತ್ತೊಂದು ಭಾರೀ ಮುಖಭಂಗ| ಪಾಕಿಸ್ತಾನದ ವಿರುದ್ಧ ಉಗ್ರ ಪೋಷಣಗೆ ಆರ್ಥಿಕ ನೆರವಿನ ಆರೋಪ| ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿದ ಜಾಗತಿಕ ಸರ್ವೇಕ್ಷಣಾ ಸಂಸ್ಥೆ| ಕ್ಯಾನ್ ಬೆರ್ರಾದಲ್ಲಿ ನಡೆದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(FATF) ಸಭೆ| ಉಗ್ರವಾದದ ವಿರುದ್ಧದ ಕೈಗೊಂಡಿರುವ ಕ್ರಮಗಳು ಫತ್ಫ್ ಮಾನದಂಡಕ್ಕೆ ಸಮವಾಗಿಲ್ಲ| ಫತ್ಫ್ ನಿಗದಿಪಡಿಸಿದ್ದ 40 ಮಾನದಂಡಗಳ ಪೈಕಿ 32ರಲ್ಲಿ ಪಾಕಿಸ್ತಾನ ವಿಫಲ|
ವಾಷಿಂಗ್ಟನ್(ಆ.23): ಹೋದಲ್ಲಿ ಬಂದಲ್ಲಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನಕ್ಕೆ ಜಾಗತಿಕವಾಗಿ ಮುಖಭಂಗವಾಗಿದ್ದು, ಉಗ್ರ ಪೋಷಣೆ ಮಾಡುವ ಆರೋಪದಲ್ಲಿ ಜಾಗತಿಕ ಸರ್ವೇಕ್ಷಣಾ ಸಂಸ್ಥೆ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಿದೆ.
ಕ್ಯಾನ್ ಬೆರ್ರಾದಲ್ಲಿ ನಡೆದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(FATF) ಸಭೆಯಲ್ಲಿ ಪಾಕ್ ವಿರುದ್ಧದ ನಿರ್ಣಯಕ್ಕೆ ಸರ್ವಾನುಮತದ ಅಂಗೀಕಾರ ದೊರೆತಿದೆ. ಉಗ್ರ ಪೋಷಣೆಗೆ ಆರ್ಥಿಕ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು 'ವರ್ಧಿತ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಫತ್ಫ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕೈಗೊಂಡಿದ್ದ ಕ್ರಮಗಳು ಫತ್ಫ್'ನ ನ ಮಾನದಂಡಕ್ಕೆ ಸಮವಾಗಿಲ್ಲದ ಕಾರಣಕ್ಕೆ ಸಂಸ್ಥೆ ಈ ನಿರ್ಣಯ ಕೈಗೊಂಡಿದೆ ಎನ್ನಲಾಗಿದೆ.
ಫತ್ಫ್ ನಿಗದಿಪಡಿಸಿದ್ದ 40 ಮಾನದಂಡಗಳ ಪೈಕಿ 32 ಮಾನದಂಡಗಳಲ್ಲಿ ಪಾಕಿಸ್ತಾನ ವಿಫಲವಾಗಿದ್ದು, ಆ ರಾಷ್ಟ್ರವನ್ನ ಕಪ್ಪುಪಟ್ಟಿಗೆ ಸೇರಿಸದೇ ಬೇರೆ ವಿಧಿಯಿಲ್ಲ ಎಂದು ಫತ್ಫ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.