Asianet Suvarna News Asianet Suvarna News

ಕಾರ್ಗಿಲ್ ಯುದ್ಧ ಭಾರತದ ತಾಕತ್ತಿಗೆ ಸಾಕ್ಷಿ: ಪ್ರಧಾನಿ ಮೋದಿ!

‘ಕಾರ್ಗಿಲ್ ಯುದ್ಧದ ಫಲಿತಾಂಶ ಭಾರತದ ಶಕ್ತಿಯ ಪ್ರದರ್ಶನ’| ಪ್ರಧಾನಿ ನರೇಂದ್ರ ಮೋದಿ ಅಭಿಮತ| ಕಾರ್ಗಿಲ್ ಯುದ್ಧದ 20 ವರ್ಷಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ| ‘ಭಾರತವನ್ನು ವಿಶ್ವದ ಯಾವುದೇ ಶಕ್ತಿಯಿಂದ ಮಣಿಸಲು ಸಾಧ್ಯವಿಲ್ಲ’| ‘ಭಾರತಾಂಬೆಯ ರಕ್ಷಣೆಗೆ ತಮ್ಮ ಜೀವಗಳನ್ನು ಬಲಿಕೊಟ್ಟ ವೀರ ಯೋಧರಿಗೆ ನಮನ’|

PM Modi Says Kargil Victory Was Symbol Of India Capability
Author
Bengaluru, First Published Jul 27, 2019, 9:10 PM IST

ನವದೆಹಲಿ(ಜು.27): ಕಾರ್ಗಿಲ್ ಯುದ್ಧದ ಫಲಿತಾಂಶ ಭಾರತದ ಶಕ್ತಿಯ ಪ್ರದರ್ಶನವಾಗಿದ್ದು, ಭಾರತವನ್ನು ವಿಶ್ವದ ಯಾವುದೇ ಶಕ್ತಿಯಿಂದ ಮಣಿಸಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾರ್ಗಿಲ್ ಯುದ್ಧದ 20 ವರ್ಷಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತಾಂಬೆಯ ರಕ್ಷಣೆಗೆ ತಮ್ಮ ಜೀವಗಳನ್ನು ಬಲಿಕೊಟ್ಟ ವೀರ ಯೋಧರಿಗೆ ನಮನ ಸಲ್ಲಿಸಿದರು.

ಭಾರತದ ವೀರಪುತ್ರರಿಗೆ ಜನ್ಮ ನೀಡಿದ ತಾಯಂದಿರಿಗೂ ನನ್ನ ನಮನಗಳು ಎಂದು ಹೇಳಿದ ಪ್ರಧಾನಿ, ದೇಶರಕ್ಷಣೆಯಲ್ಲಿ ಜೀವತೆತ್ತ ಪ್ರತಿಯೊಬ್ಬ ಸೈನಿಕನನ್ನು ಈ ದೇಶ ಎಂದಿಗೂ ಮರೆಯವುದಿಲ್ಲ ಎಂದು ಹೇಳಿದರು.

ಕಾರ್ಗಿಲ್’ನಲ್ಲಿ ಭಾರತೀಯ ಸೈನಿಕರು ತ್ರಿವರ್ಣ ಧ್ವಜ ನೆಟ್ಟ ಸ್ಥಳ ತಮ್ಮ ಪಾಲಿಗೆ ಯಾವುದೇ ಧಾರ್ಮಿಕ ಕ್ಷೇತ್ರಕ್ಕಿಂತ ಕಡಿಮೆ ಇಲ್ಲ ಎಂದ ಪ್ರಧಾನಿ, ಯುದ್ಧ ಬಯಸಿ ಬಂದ ಪಾಕಿಸ್ತಾನಕ್ಕೆ ಸೂಕ್ತಗ ತಿರುಗೇಟು ನೀಡಿದ ಆ ಹೆಮ್ಮಯ ಕ್ಷಣ ಪ್ರತಿಯೊಬ್ಬ ಭಾರತೀಯನ ಮನದಲ್ಲಿದೆ ಎಂದು  ನುಡಿದರು.

ಇದಕ್ಕೂ ಮೊದಲು ಸೇನೆಯ ವಿವಿಧ ವಿಭಾಗಗಳಿಂದ ಕಾರ್ಯಕ್ರಮಗಳು ನಡೆದವು. ಮತ್ತು ದೆಹಲಿಯ ಇಂಡಿಯಾ ಗೇಟ್ ಬಳಿ ಆಕರ್ಷಕ ಸೇನಾ ಕವಾಯತು ಆಯೋಜಿಸಲಾಗಿತ್ತು.

#WATCH Delhi: Celebrations underway at India Gate on the occasion of #CRPFFoundationday today. pic.twitter.com/6Dod3xLD16

 

ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಮಾಜಿ ಸೇನಾಧಿಕಾರಿಗಳು  ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. 

Follow Us:
Download App:
  • android
  • ios