ಬೀಡ್(ಅ.17): ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕ್ರಮವನ್ನು ಅಪಹಾಸ್ಯ ಮಾಡಿದವರು ಶೀಘ್ರದಲ್ಲೇ ಇತಿಹಾಸವಾಗಲಿದ್ದಾರೆ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.

ಬೀಡ್’ನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಶ್ಮೀರ ವಿಚಾರದಲ್ಲಿ ಅಪಹಾಸ್ಯ ಮಾಡಿದವರನ್ನು ಇತಿಹಾಸ  ನೋಡಿಕೊಳ್ಳಲಿದೆ ಎಂದು ಹರಿಹಾಯ್ದರು.

ದಂಗಲ್ ವೀಕ್ಷಿಸಿದ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ

ಕಾಶ್ಮೀರದಲ್ಲಿ ಹಿಂದೂಗಳಿದ್ದಿದ್ದರೆ ತಮ್ಮ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಕೆಲ ಕಾಂಗ್ರೆಸ್ ನಾಯಕರು ಹೇಳಿದ್ದು, ರಾಷ್ಟ್ರದ ಐಕ್ಯತೆ ವಿಷಯ ಬಂದಾಗ ಹಿಂದೂ-ಮುಸ್ಲಿಮರೆಂದು ಯೋಚಿಸುವ ಸಂಕುಚಿತ ಮನೋಭಾವಕ್ಕೆ ತಕ್ಕ ಪಾಠ ಕಲಿಸುವಂತೆ ಪ್ರಧಾನಿ ಮೋದಿ ಜನತೆಗೆ ಕರೆ ನೀಡಿದರು.

ವಿಶೇಷ ಸ್ಥಾನಮಾನ ರದ್ದತಿ ಕುರಿತು ಕಾಂಗ್ರೆಸ್ ನಾಯಕರು ಆಡಿರುವ ಮಾತುಳನ್ನೆಲ್ಲಾ ಹೇಳಬೇಕೆಂದರೆ ನಾನು ಇಲ್ಲಿ ಅಕ್ಟೋಬರ್ 21ರ ಚುನಾವಣೆ ದಿನದವರೆಗೂ ಉಳಿಯಬೇಕು ಎಂದು ಪ್ರಧಾನಿ ವ್ಯಂಗ್ಯವಾಡಿದರು.

ಪಾಕ್‌ಗೆ ನೀರು ನಿಲ್ಲಿಸುವೆ: ಪ್ರಧಾನಿ ಮೋದಿ ಅಚ್ಚರಿಯ ಘೋಷಣೆ!

ಕಾಶ್ಮೀರ ವಿಚಾರವಾಗಿ ಹಗುರವಾಗಿ ಮಾತನಾಡಿದರಿಗೆ ತಕ್ಕ ಪಾಠ ಕಲಿಸುವ ಅವಕಾಶ ಮಹಾರಾಷ್ಟ್ರದ ಬಾಗಿಲನ್ನು ತಟ್ಟುತ್ತಿದ್ದು, ದೇಶದ ಹಿತಾಸಕ್ತಿ ವಿರುದ್ಧ ಮಾತನಾಡಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮೋದಿ ಜನರಲ್ಲಿ ಮನವಿ ಮಾಡಿದರು.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಈ ಹಿಂದಿನ ದಾಖಲೆಗಳನ್ನೆಲ್ಲಾ ಮುರಿದು ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ಆಶಾಭಾವ ವ್ಯಕ್ತಪಡಿಸಿದರು.

ಮಹಾರಾಷ್ಟ್ರ, ಹರ್ಯಾಣ ಚುನಾವಣೆ ಮೋದಿಗೆ ಏಕೆ ಮುಖ್ಯ?

ಈ ಬಾರಿಯ ರಾಜ್ಯ ಚುನಾವಣೆ ಬಿಜೆಪಿಯ ಕಾರ್ಯಶಕ್ತಿ ಮತ್ತು ವಿರೋಧ ಪಕ್ಷಗಳ ಸ್ವಾರ್ಥಶಕ್ತಿಯ ನಡುವಿನ ಸೆಣಸಾಟವಾಗಿದ್ದು, ಜನತೆ ಸತ್ಯದ ಪರ ನಿಲ್ಲಲಿದ್ದಾರೆ ಎಂಬ ವಿಶ್ವಾಸ ಇರುವುದಾಗಿ ಮೋದಿ ನುಡಿದರು.