ವಾರಾಣಸಿ (ಮಾ. 09):  ಹಿಂದೂಗಳ ಪವಿತ್ರ ಕ್ಷೇತ್ರವಾದ ಕಾಶಿ ವಿಶ್ವನಾಥ ಮಂದಿರದ ಸರ್ವಾಂಗೀಣ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಮಹತ್ವದ ‘ಕಾಶಿ ವಿಶ್ವನಾಥ ಧಾಮ’ ಯೋಜನೆಗೆ ವಾರಾಣಸಿ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರು.

'ಲೋಕಸಭಾ ಚುನಾವಣೆ : ಜೆಡಿಎಸ್ - ಕಾಂಗ್ರೆಸ್ ಮೈತ್ರಿಗೆ ಭರ್ಜರಿ ಗೆಲುವು'

ಈ ಯೋಜನೆಯ ಅನುಸಾರ ಮಂದಿರದ ಸುತ್ತಮುತ್ತ ಒತ್ತುವರಿ ಮಾಡಿಕೊಂಡು ಅಥವಾ ಅಧಿಕೃತವಾಗಿ ನಿರ್ಮಿಸಲ್ಪಟ್ಟಿದ್ದ ಸುಮಾರು 300 ಕಟ್ಟಡಗಳನ್ನು ಧ್ವಂಸಗೊಳಿಸಲಾಗುತ್ತಿದ್ದು, ಅಲ್ಲಿದ್ದ ಜನರಿಗೆ ಮರುವಸತಿ ಕಲ್ಪಿಸಲಾಗಿದೆ. ಈ ಕಟ್ಟಡಗಳ ತೆರವು ಕಾರ್ಯಾಚರಣೆ ನಂತರ ಇಕ್ಕಟ್ಟಾದ ವಲಯದಲ್ಲಿ ಇದ್ದ ಕಾಶಿ ವಿಶ್ವನಾಥ ಮಂದಿರಕ್ಕೆ ವಿಶಾಲ ಪ್ರಾಂಗಣ, ಯಾತ್ರಿಕರಿಗೆ ವಿವಿಧ ಸೌಕರ್ಯಗಳು ಲಭಿಸಲಿವೆ. ಅಲ್ಲದೆ, ಮಂದಿರದಿಂದ ಕೆಲವು ನೂರು ಮೀಟರ್‌ಗಳ ಅಂತರದಲ್ಲಿರುವ ಗಂಗಾನದಿಯ ದರುಶನ ಭಾಗ್ಯವು ಮಂದಿರದಿಂದಲೇ ನೇರವಾಗಿ ಪ್ರಾಪ್ತಿಯಾಗಲಿದೆ.

ಮರಾಠ ನಾಡಲ್ಲಿ ಮತ್ತೆ ಸಾಂಪ್ರದಾಯಿಕ ಸ್ಪರ್ಧೆ

ಕಾಂಗ್ರೆಸ್‌, ಎಸ್‌ಪಿ ವಿರುದ್ಧ ವಾಗ್ದಾಳಿ:

ಈ ಮಹತ್ವದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಮೋದಿ, ‘70 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಸರ್ಕಾರಗಳು ಬಾಬಾ (ವಿಶ್ವನಾಥ- ಶಿವ) ಬಗ್ಗೆ ಯೋಚನೆಯನ್ನೇ ಮಾಡಲಿಲ್ಲ. ಆದರೆ ನನ್ನ ಸೌಭಾಗ್ಯವೋ ಏನೋ. ಮಂದಿರದ ಅಭಿವೃದ್ಧಿ ಕೆಲಸ ಮಾಡುವ ಭಾಗ್ಯವು ನನಗೆ ಒದಗಿ ಬಂದಿದೆ’ ಎಂದರು.

‘ನೀನು ತಂಬಾ ಮಾತಾಡುತ್ತೀಯಾ. ಅದಕ್ಕೇ ಇಲ್ಲಿ ಬಾ. ನನ್ನ ಕೆಲವು ಕೆಲಸಗಳನ್ನೂ ಮಾಡಿಕೊಡು’ ಎಂದು ಕಾಶಿ ವಿಶ್ವನಾಥನು ನನಗೆ ಅನುಗ್ರಹಿಸಿದಂತೆ ಕಾಣುತ್ತದೆ. ಅದಕ್ಕೇ ಕಾಶಿಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ. ಇದರಿಂದ ಕಾಶಿ ವಿಶ್ವನಾಥ ಧಾಮಕ್ಕೆ ‘ಮುಕ್ತಿ’ ಸಿಗಲಿದೆ ಎಂದು ನಗೆಗಡಲಿನ ಮಧ್ಯೆ ಮೋದಿ ಹೇಳಿದರು.

‘ಮಂದಿರ ವಿಸ್ತರಣಾ ಕಾರ್ಯ ನಾನು ಇಲ್ಲಿಗೆ ಬಂದಾಗಲೇ ಆರಂಭವಾಗಬೇಕಿತ್ತು. ಆದರೆ ಸಮಾಜವಾದಿ ಪಾರ್ಟಿ ಸರ್ಕಾರ ಇದಕ್ಕೆ 3 ವರ್ಷ ಅಡ್ಡಗಾಲು ಹಾಕಿತು. 2 ವರ್ಷದ ಹಿಂದೆ ಯೋಗಿ ಸರ್ಕಾರ ಬಂದ ನಂತರ ಅಭಿವೃದ್ಧಿ ಕೆಲಸಗಳಿಗೆ ಇದ್ದ ಅಡೆತಡೆ ನಿವಾರಣೆಯಾಯಿತು’ ಎಂದೂ ಪ್ರಧಾನಿ ಹೇಳಿದರು.

ಈ ನಡುವೆ, ಕಾಶಿ ವಿಶ್ವನಾಥನ ಲಿಂಗಕ್ಕೆ ಪ್ರಧಾನಮಂತ್ರಿಗಳು ಪಂಚಾಮೃತ ಅಭಿಷೇಕ ನೆರವೇರಿಸಿದರು.