ಹುಬ್ಬಳ್ಳಿ:  ನಾಮದ ಬಗೆಗಿನ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಕುಂಕುಮದ ಉದ್ದನಾಮವನ್ನು ಕ್ರಿಮಿನಲ್ ಗಳೂ ಇಟ್ಟುಕೊಳ್ಳುತ್ತಾರೆ. ಚಿಕ್ಕನಾಮ ಮೂರುನಾಮಗಳನ್ನು ನೋಡಿದರೆ ಭಯವಾಗುತ್ತದೆ ಎಂದು ಹೇಳಿಲ್ಲ. ನನಗಿಂತ ಒಳ್ಳೆಯ ಹಿಂದೂ ಯಾರಿದ್ದಾರೆ. ಮನುಷ್ಯತ್ವ ಇರುವವರೆಲ್ಲರೂ ಹಿಂದೂಗಳೆ  ಎಂದಿದ್ದಾರೆ. 

ಈ ನಾಲ್ವರಲ್ಲಿ ಯಾರಾಗಲಿದ್ದಾರೆ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ..?

ಇನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಜೈ ಜವಾನ್ ಜೈ ಕಿಸಾನ್ ಎಂದು ಹೇಳಿದ್ದು ಬಿಜೆಪಿ ಅಲ್ಲ, ಹೀಗೆ ಹೇಳಿದ್ದು ಕಾಂಗ್ರೆಸ್ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ ಎಂದರು. 

ಇನ್ನು ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ನಾನು ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಜನ ಅಭಿಮಾನದಿಂದ ಹೇಳುತ್ತಿದ್ದಾರಷ್ಟೇ ಎಂದರು. 

ಸಿದ್ದರಾಮಯ್ಯ ವಿರುದ್ಧ 'ಸೆಲ್ಫಿ ವಿತ್ ತಿಲಕ' ಅಭಿಯಾನ!

ಇನ್ನು ಜೆಡಿಎಸ್  ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತಿದ್ದು, 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಯಡಿಯೂರಪ್ಪ ಸರ್ಜಿಕಲ್ ದಾಳಿಯಿಂದ ಗೆಲ್ಲುತ್ತೇವೆ ಎಂದರು, ಆದರೆ ತಾವು ಜನರ ನಾಡಿ ಮಿಡಿತ ಅರ್ಥೈಸಿಕೊಂಡು ಹೇಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.