ಭಾರತ –ಚೀನಾ ಗಡಿ ಸಮಸ್ಯೆ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ದೇವೇಗೌಡರನ್ನು ದೆಹಲಿಗೆ ಆಹ್ವಾನಿಸಿದ್ದಾರೆ. ಪ್ರಧಾನಿ ಆಹ್ವಾನದ ಹಿನ್ನೆಲೆಯಲ್ಲಿ ಪಕ್ಷದ ಸಭೆಯನ್ನು ಬಿಟ್ಟು ದೇವೇಗೌಡರು ದೆಹಲಿಗೆ ತೆರಳಿದ್ದಾರೆ.

ನವದೆಹಲಿ: ಭಾರತ –ಚೀನಾ ಗಡಿ ಸಮಸ್ಯೆ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ದೇವೇಗೌಡರನ್ನು ದೆಹಲಿಗೆ ಆಹ್ವಾನಿಸಿದ್ದಾರೆ. ಪ್ರಧಾನಿ ಆಹ್ವಾನದ ಹಿನ್ನೆಲೆಯಲ್ಲಿ ಪಕ್ಷದ ಸಭೆಯನ್ನು ಬಿಟ್ಟು ದೇವೇಗೌಡರು ದೆಹಲಿಗೆ ತೆರಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸೂಚನೆ ಮೇರೆಗೆ ದೇವೇಗೌಡರಿಗೆ ಕರೆ ಮಾಡಿದ ವಿದೇಶಾಂಗ ಸಚಿವೆ ಸಚಿವೆ ಸುಷ್ಮಾಸ್ವರಾಜ್, ಆರಂಭದಲ್ಲಿ ದೇವೇಗೌಡರ ಜೊತೆ ಕನ್ನಡದಲ್ಲೇ ಮಾತನಾಡಿದ್ದಾರೆ.

ಚೆನ್ನಾಗಿದ್ದೀರಾ, ಆರೋಗ್ಯ ಹೇಗಿದೆ? ದೆಹಲಿಗೆ ಬರಬಹುದಾ? ನಿಮ್ಮ ಸಲಹೆ ಬೇಕಿದೆ ಎಂದ ಸುಷ್ಮಾ ಸ್ವಾರಾಜ್ ಭಾರತ-ಚೀನಾ ಗಡಿ ಸಮಸ್ಯೆ ಬಗ್ಗೆ ಚರ್ಚಿಸಲು ದೇವೇಗೌಡರಿಗೆ ಆಹ್ವಾನ ನೀಡಿದ್ದಾರೆ.

(ಸಾಂದರ್ಭಿಕ ಚಿತ್ರ)