Asianet Suvarna News Asianet Suvarna News

ಮೋದಿ ಉದ್ಘಾಟಿಸಿದ ಧೋಲಾ-ಸಾದಿಯಾ ಸೇತುವೆಯ ವಿಶೇಷತೆಗಳೇನು?

60 ಟನ್'ಗಳಷ್ಟು ತೂಕದ ಸೇನಾ ಟ್ಯಾಂಕ್'ನ ಸಾಗಣೆಯನ್ನು ಈ ಸೇತುವೆ ಹೊರಬಲ್ಲುದು. ಚೀನಾದ ಗಡಿ ಬಳಿ ಇರುವ ದಿಬಾಂಗ್ ಮತ್ತು ಅಂಜಾ ಎಂಬ ಪ್ರದೇಶಗಳನ್ನು ತಲುಪಲು ಈ ಮುಂಚೆ 2 ದಿನ ತಗುಲುತ್ತಿತ್ತು. ಈಗ ಈ ಸಮಯ ಸಾಕಷ್ಟು ಕಡಿಮೆಯಾಗಲಿದೆ

pm modi inaugurates dhola sadia bridge

ನವದೆಹಲಿ: ಎನ್'ಡಿಎ ಸರಕಾರ 3 ವರ್ಷ ತುಂಬಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೇಶದ ಅತಿದೊಡ್ಡ ಸೇತುವೆಯನ್ನು ಲೋಕಾರ್ಪಣೆ ಮಾಡಿದರು. ಅರುಣಾಚಲಪ್ರದೇಶದ ಲೋಹಿತ್ ನದಿ ಮೇಲೆ ನೂತನವಾಗಿ ನಿರ್ಮಿಸಿದ ಧೋಲಾ-ಸಾದಿಯಾ ಸೇತುವೆಯನ್ನು ಮೋದಿ ಶುಕ್ರವಾರ ಉದ್ಘಾಟಿಸಿದರು.

ದೇಶದಲ್ಲಿ ಕೈಗೊಳ್ಳಲಾದ ಅತ್ಯಂತ ಪ್ರಮುಖ ಮೂಲಭೂತ ಸೌಕರ್ಯ ಯೋಜನೆಗಳಲ್ಲಿ ಈ ಸೇತುವೆಯೂ ಒಂದು ಎಂದು ಮೋದಿ ಬಣ್ಣಿಸಿದ್ದಾರೆ.

ಧೋಲಾ-ಸಾದಿಯಾ ಸೇತುವೆ ವೈಶಿಷ್ಟ್ಯವೇನು?
* ಬ್ರಹ್ಮಪುತ್ರ ನದಿಯ ಉಪನದಿಯಾಗಿರುವ ಲೋಹಿತ್ ನದಿಯ ಮೇಲೆ ನಿರ್ಮಿಸಲಾಗಿದೆ.
* 9.15 ಕಿಮೀ ಉದ್ದವಿರುವ ಈ ಸೇತುವೆಯಲ್ಲಿ ತ್ರಿಪಥ ರಸ್ತೆ ಇದೆ
* ಯೋಜನೆಗೆ ತಗುಲಿದ ಒಟ್ಟು ವೆಚ್ಚ 2,056 ಕೋಟಿ ರೂ.
* ಮುಂಬೈನ ಬಾಂದ್ರಾ-ವೋರ್ಲಿ ಸೇತುವೆಗಿಂತ(5.6 ಕಿಮೀ) ಮುಕ್ಕಾಲು ಪಾಲು ದೊಡ್ಡದು ಇದು
* ಅಸ್ಸಾಮ್ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಿಗೆ ಇದು ಕೊಂಡಿ
* ಅಸ್ಸಾಮ್'ನ ಧೋಲಾ ಮತ್ತು ಅರುಣಾಚಲದ ಸಾದಿಯಾಗೆ ಇದು ಕನೆಕ್ಟ್ ಆಗುತ್ತದೆ.
* ಈ ಸೇತುವೆಯಿಂದಾಗಿ ಎರಡೂ ರಾಜ್ಯಗಳ ನಡುವಿನ ಪ್ರಯಾಣದ ಅವಧಿ 4 ಗಂಟೆಗಳಷ್ಟು ಕಡಿಮೆ ಮಾಡುತ್ತದೆ.
* ಸೇನಾ ಸಾಮಗ್ರಿಗಳ ಸಾಗಣೆಗೆ ಈ ಸೇತುವೆ ಬಹಳ ನೆರವಾಗುತ್ತದೆ
* 60 ಟನ್'ಗಳಷ್ಟು ತೂಕದ ಸೇನಾ ಟ್ಯಾಂಕ್'ನ ಸಾಗಣೆಯನ್ನು ಈ ಸೇತುವೆ ಹೊರಬಲ್ಲುದು.
* ಚೀನಾದ ಗಡಿ ಬಳಿ ಇರುವ ದಿಬಾಂಗ್ ಮತ್ತು ಅಂಜಾ ಎಂಬ ಪ್ರದೇಶಗಳನ್ನು ತಲುಪಲು ಈ ಮುಂಚೆ 2 ದಿನ ತಗುಲುತ್ತಿತ್ತು. ಈಗ ಈ ಸಮಯ ಸಾಕಷ್ಟು ಕಡಿಮೆಯಾಗಲಿದೆ.

Follow Us:
Download App:
  • android
  • ios