Asianet Suvarna News Asianet Suvarna News

ಮೋದಿಯಿಂದ ದೆಹಲಿ-ಮಿರಟ್ ಎಕ್ಸಪ್ರೆಸ್ ವೇ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿ-ಮಿರಟ್ ಮತ್ತು ಈಸ್ಟರ್ನ್  ಪೆರಿಫರೆಲ್ ಎಕ್ಸಪ್ರೆಸ್ ವೇಯನ್ನು ದೇಶಕ್ಕೆ ಸಮರ್ಪಿಸಿದರು. ದೆಹಲಿ-ಮಿರಟ್ ಹೈವೇ ದೇಶದ ಮೊದಲ 14 ಲೇನ್ ಹೆದ್ದಾರಿಯಾಗಿದ್ದು, ಸುಮಾರು 7.500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

PM Modi Inaugurated Delhi-Meerut, Eastern Peripheral Expressway

ನವದೆಹಲಿ(ಮೇ.27): ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿ-ಮಿರಟ್ ಮತ್ತು ಈಸ್ಟರ್ನ್  ಪೆರಿಫರೆಲ್ ಎಕ್ಸಪ್ರೆಸ್ ವೇಯನ್ನು ದೇಶಕ್ಕೆ ಸಮರ್ಪಿಸಿದರು. ದೆಹಲಿ-ಮಿರಟ್ ಹೈವೇ ದೇಶದ ಮೊದಲ 14 ಲೇನ್ ಹೆದ್ದಾರಿಯಾಗಿದ್ದು, ಸುಮಾರು 7.500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ದೆಹಲಿ-ಮಿರಟ್ ಹೆದ್ದಾರಿಗೆ ತೆರೆದ ವಾಹನದಲ್ಲಿ ಬಂದ ಪ್ರಧಾನಿ ಹೆದ್ದಾರಿಯನ್ನು ಉದ್ಘಾಟಿಸಿದರು. ತೆರೆದ ವಾಹನದಲ್ಲಿ ಸುಮಾರು 8 ಕಿ.ಮೀ ರೋಡ್ ಶೋ ನಡೆಸಿದ ಮೋದಿ, ರಸ್ತೆ ಲೋಕಾರ್ಪಣೆ ಮಾಡಿದರು. ರಸ್ತೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಮೋದಿಯತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದರು. ಈ ಹಿಂದಿನ 32 ಸಿಗ್ನಲ್ ಉಳ್ಳ ಹಳೆಯ ಹೆದ್ದಾರಿ ಬದಲಾಗಿ ಇನ್ಮುಂದೆ ಈ ನೂತನ ಹೆದ್ದಾರಿ ಬಳಸಬಹುದಾಗಿದೆ. ಇದರಿಂದ ಇಂಧನ ಮತ್ತು ಸಮಯದ ಉಳಿತಾಯ ಸಾಧ್ಯ.

ಇನ್ನು 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈಸ್ಟರ್ನ್ ಪೆರಿಫರೆಲ್ ರಸ್ತೆ ಕೂಡ ಉದ್ಘಾಟನೆಗೆ ಸಿದ್ದವಾಗಿದೆ. ಈ ಎರಡೂ ಹೆದ್ದಾರಿಗಳು ಪರಿಸರ ಸ್ನೇಹಿಯಾಗಿದ್ದು, ಮಾರ್ಚ್ 2019 ರಲ್ಲಿ ಯೋಜನೆ ಸಂಪೂರ್ಣವಾಗಿ ಸಾರ್ವಜನಿಕ ಬಳಕೆಗೆ ಸಿದ್ದವಾಗುತ್ತವೆ. ದೆಹಲಿ-ಮಿರಟ್ ಹೈವೇಯನ್ನು ಮಾಲಿನ್ಯದಿಂದ ಮುಕ್ತಿ ರಸ್ತೆ ಎಂದು ಬಣ್ಣಿಸಿದ್ದಾರೆ.
 

Follow Us:
Download App:
  • android
  • ios