ಕಲಬುರಗಿ[ಮಾ.06]: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರ ಕಲಬುರಗಿಯಲ್ಲಿ ಮೋದಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಮೈತ್ರಿ ಸರ್ಕಾರದ ವಾಗ್ದಾಳಿ ನಡೆಸಿರುವ ಮೋದಿ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವ ಮೂಲಕ ರಾಜ್ಯ ಸರ್ಕಾರಕ್ಕೆ ತಿವಿದಿದ್ದಾರೆ.

"

ರಾಜ್ಯ ಸಮರ: ಯುಪಿಯಲ್ಲಿ ಈ ಸಲವೂ ಬಿಜೆಪಿ ಮ್ಯಾಜಿಕ್ ಮಾಡುತ್ತಾ?

ಕರ್ನಾಟಕ ಸರ್ಕಾರ ರೈತರ ವಿರೋಧಿಯಾಗಿದೆ. ಈ ಸರ್ಕಾರವನ್ನು ರೈತರು ಎಂದಿಗೂ ಕ್ಷಮಿಸುವುದಿಲ್ಲ. ರೈತರ ಯೋಜನೆಗಳಿಗೆ ರಾಜ್ಯ ಸರ್ಕಾರ ಅಡ್ಡಗೋಡೆಯಾಗಿದೆ. ರಿಮೋಟ್ ನಿಂದ ಆಡಳಿತ ನಡೆಸುತ್ತಿರುವ ಕುಮಾರಸ್ವಾಮಿ ರೈತರ ಪಟ್ಟಿಯನ್ನೇ ಕೊಟ್ಟಿಲ್ಲ. ರೈತರ ಖಾತೆಗೆ ಕೇಂದ್ರದ ನಗದು ಜಮೆಗೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಡ್ಡಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೈತ್ರಿ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು, ಇಲ್ಲಿನ ಸಿಎಂ ಅವರ ರಿಮೋಟ್ ಮತ್ತೊಬ್ಬರ ಬಳಿ ಇದೆ. ಅವರು ಹೇಳಿದಂತೆ ಇವರು ಕೇಳಬೇಕು. ಮೈತ್ರಿಯಲ್ಲಿ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.

ಕಮಲ ಹಿಡಿದ ಜಾಧವ್: ಸೋಲಿಲ್ಲದ ಸರದಾರನಿಗೆ ಸವಾಲ್!

ಅಭಿವೃದ್ಧಿಯೇ ನಮ್ಮ ಗುರಿ:

ಕಲಬುರ್ಗಿ ನಗರದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯ ಸರ್ಕಾರ ಕೈ ಬಿಟ್ಟಿದ್ದ ಅನೇಕ ಯೋಜನೆಗಳನ್ನು ನಾವು ಚಾಲನೆ ನೀಡಿದ್ದೇವೆ. ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಪಣ ತೊಟ್ಟಿದ್ದೇವೆ. ಚಿತ್ತಾಪುರ್, ಯಾದಗಿರಿ, ಮಹಾರಾಷ್ಟ್ರ, ಬೀದರ್ ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸಿದ್ದೇವೆ. ಜಿಲ್ಲೆಯನ್ನು ಸುಂದರಗೊಳಿಸಲು ಅಮೃತ್ ಮಿಷನ್ ಯೋಜನೆಗೆ ನೆರವು ನೀಡಿದ್ದೇವೆ ಎಂದರು.

"