ರೈತರಿಗೆ ಮೋದಿ ಸರ್ಕಾರ ಬಂಪರ್‌ ಕೊಡುಗೆ ಘೋಷಣೆ..?

PM Modi Bumper Offer To Farmers
Highlights

 ರೈತರ ಕೃಷಿ ಉತ್ಪನ್ನಕ್ಕೆ ಹೆಚ್ಚಿನ ಬೆಲೆ ನೀಡುವ ತನ್ನ ಬಜೆಟ್‌ ವಾಗ್ದಾನವನ್ನು ಪೂರೈಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಬುಧವಾರ ಮುಂಗಾರು ಬೆಳೆಗಳಿಗೆ ಭರ್ಜರಿ ಪ್ರಮಾಣದಲ್ಲಿ ಕನಿಷ್ಟಬೆಂಬಲ ಬೆಲೆ ನಿಗದಿಪಡಿಸುವ ಸಾಧ್ಯತೆ ಇದೆ.

ನವದೆಹಲಿ: ರೈತರ ಕೃಷಿ ಉತ್ಪನ್ನಕ್ಕೆ ಹೆಚ್ಚಿನ ಬೆಲೆ ನೀಡುವ ತನ್ನ ಬಜೆಟ್‌ ವಾಗ್ದಾನವನ್ನು ಪೂರೈಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಬುಧವಾರ ಮುಂಗಾರು ಬೆಳೆಗಳಿಗೆ ಭರ್ಜರಿ ಪ್ರಮಾಣದಲ್ಲಿ ಕನಿಷ್ಟಬೆಂಬಲ ಬೆಲೆ ನಿಗದಿಪಡಿಸುವ ಸಾಧ್ಯತೆ ಇದೆ.

ಬುಧವಾರ ಆರ್ಥಿಕ ವ್ಯವಹಾರಗಳ ಕುರಿತ ಕೇಂದ್ರ ಸಚಿವ ಸಂಪುಟ ನಡೆಯಲಿದ್ದು, ಇದರಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಬೆಳೆಯುವ 14 ಕೃಷಿ ಉತ್ಪನ್ನಗಳಿಗೆ, ಉತ್ಪಾದನಾ ವೆಚ್ಚದ ಶೇ.150ರಷ್ಟುಕನಿಷ್ಟಬೆಂಬಲ ಬೆಲೆ ಘೋಷಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ರಾಗಿಗೆ ಭಾರೀ ಬಲ: 14 ಮುಂಗಾರು ಬೆಳೆಗಳ ಪೈಕಿ ರಾಗಿಗೆ ಗರಿಷ್ಟಪ್ರಮಾಣದಲ್ಲಿ ಕನಿಷ್ಟಬೆಂಬಲ ಬೆಲೆ ಘೋಷಣೆಯಾಗುವ ಸಾಧ್ಯತೆ ಇದೆ. ಹಾಲಿ, ಪ್ರತಿ ಕ್ವಿಂಟಾಲ್‌ ರಾಗಿಗೆ 1800 ರು. ಕನಿಷ್ಟಬೆಂಬಲ ಬೆಲೆ ಇದ್ದು ಅದನ್ನು 900 ರು.ನಷ್ಟುಭಾರೀ ಪ್ರಮಾಣದಲ್ಲಿ ಏರಿಸುವ ಮೂಲಕ 2700 ರು. ತಲುಪಿಸಲಾಗುವುದು ಎನ್ನಲಾಗಿದೆ.

ಭತ್ತಕ್ಕೂ ಭಾರೀ ಏರಿಕೆ:  ಮುಂಗಾರು ಹಂಗಾಮಿನ ಬೆಳೆಗಳ ಪೈಕಿ ಭತ್ತ ಅತ್ಯಂತ ಪ್ರಮುಖ ಬೆಳೆಯಾಗಿದ್ದು, ಭತ್ತದ ಕನಿಷ್ಟಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 200 ರು.ನಷ್ಟುಏರಿಸುವ ಸಾಧ್ಯತೆ ಇದೆ. ಇದು ನಿಜವಾದಲ್ಲಿ ಇದು ಇತಿಹಾಸದಲ್ಲೇ ಭತ್ತಕ್ಕೆ ಒಂದೇ ವರ್ಷದಲ್ಲಿ ಮಾಡಲಾದ ಅತ್ಯಂತ ಗರಿಷ್ಠ ಪ್ರಮಾಣದ ಏರಿಕೆಯ ಪ್ರಮಾಣವಾಗಲಿದೆ. ಹಾಲಿ ಸಾಮಾನ್ಯ ದರ್ಜೆಯ ಭತ್ತಕ್ಕೆ ಕ್ವಿಂಟ್ವಾಲ್‌ಗೆ 1550 ರು. ಮತ್ತು ಉತ್ತಮ ಗುಣಮಟ್ಟದ ಭತ್ತಕ್ಕೆ 1590 ರು. ಕನಿಷ್ಟಬೆಂಬಲ ಬೆಲೆ ನಿಗದಿಪಡಿಸಲಾಗಿದೆ.

ಈ ಹಿಂದೆ ಯುಪಿಎ-1 ಸರ್ಕಾರ ಚುನಾವಣಾ ವರ್ಷದಲ್ಲಿ ಅಂದರೆ 2008-09ರಲ್ಲಿ ಭತ್ತಕ್ಕೆ ಕನಿಷ್ಟಬೆಂಬಲ ಬೆಲೆಯನ್ನು 155 ರು. ಏರಿಸಿದ್ದೇ ಇದುವರೆಗಿನ ಅತ್ಯಂತ ಗರಿಷ್ಠ ಪ್ರಮಾಣವಾಗಿತ್ತು. ಈ ಬಾರಿ ಮೋದಿ ಸರ್ಕಾರ ಕೂಡಾ ಚುನಾವಣಾ ವರ್ಷವನ್ನು ಗಂಭೀರವಾಗಿ ಪರಿಗಣಿಸಿದ್ದು, 13 ಮುಂಗಾರು ಹಂಗಾಮಿನ ಕೃಷಿ ಬೆಳೆಗಳಿಗೆ ಕನಿಷ್ಟಬೆಂಬಲ ಬೆಲೆಯನ್ನು ಹೆಚ್ಚಿಸುವ ಮೂಲಕ ರೈತ ಸಮುದಾಯವನ್ನು ಓಲೈಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಇದಕ್ಕಾಗಿ ಸರ್ಕಾರ ಅಂದಾಜು 15000 ಕೋಟಿ ರು. ವ್ಯಯಿಸಬೇಕಾಗಿ ಬರಲಿದೆ ಎನ್ನಲಾಗಿದೆ.

loader