ಇಸ್ಲಮಬಾದ್ :  ಕೇರಳದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಎದುರಾದ ದುಸ್ಥಿತಿಯನ್ನು ನಿವಾರಿಸಲು ಎಲ್ಲೆಡೆಯಿಂದ ನೆರವು ಹರಿದುಬರುತ್ತಿದೆ. 

ಇದೀಗ ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರೂ ಕೂಡ ಕೇರಳದಲ್ಲಿ ಎದುರಾದ ಪ್ರವಾಹ ಪರಿಸ್ಥಿತಿಗೆ ಪಾಕಿಸ್ಥಾನ ಯಾವುದೇ ರೀತಿಯಾದ ಸಹಕಾರವನ್ನೂ ಕೂಡ ನೀಡಲು ಸಿದ್ಧವಿದೆ ಎಂದು ಹೇಳಿದ್ದಾರೆ. 

ಅಲ್ಲದೇ ಶೀಘ್ರವೇ ಇಂತ ದುಸ್ಥಿತಿ ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ಹೇಳಿದ್ದಾರೆ. 

ನಮ್ಮ ಪಕ್ಕದ ದೇಶಕ್ಕೆ ಯಾವುದೇ ರೀತಿಯ ಬೆಂಬಲವನ್ನೂ ಕೂಡ ನೀಡಲು ನಾವು ಸಿದ್ಧವಾಗಿದ್ದೇವೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. 

ಭಾರತದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪಾಕಿಗಳೆಲ್ಲರೂ ಕೂಡ ಪ್ರಾರ್ಥಿಸುತ್ತಾರೆ ಎಂದು ಹೇಳಿದ್ದಾರೆ. 

ಆದರೆ ಈಗಾಗಲೇ ವಿವಿಧ ದೇಶಗಳು ಪ್ರವಾಹ ಪರಿಸ್ಥಿತಿಗೆ ನೆರವು ನೀಡಲು ಸಿದ್ಧವಾಗಿದ್ದರೂ ಭಾರತ ಸರ್ಕಾರ ಅದನ್ನು ನಿರಾಕರಿಸಿದೆ.