ನವದೆಹಲಿ(ಸೆ.25): ಪಾಕಿಸ್ತಾನ ಮೂಲದ ಜೈಷ್-ಎ-ಮೊಹ್ಮದ್ ಸಂಘಟನೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಷ್ಟ್ರೀಯ  ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನು ಕೊಲ್ಲುವ ಸಂಚು ರೂಪಿಸಿದೆ ಎನ್ನಲಾಗಿದೆ.

ಗುಪ್ತಚರ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಅಜಿತ್ ಧೋವಲ್ ಅವರನ್ನು ಜೈಷ್-ಎ-ಮೊಹ್ಮದ್ ಟಾರ್ಗೆಟ್ ಮಾಡಿದೆ ಎಂದು ತಿಳಿಸಿದೆ. ಅಲ್ಲದೇ ದೇಶದ 30 ಪ್ರಮುಖ ನಗರಗಳು, ಪ್ರಮುಖ ವಾಯುನೆಲೆಗಳ ಮೇಲೂ ಜೈಷ್ ದಾಳಿಯ ಯೋಜನೆ ರೂಪಿಸಿದೆ ಎಂದು ಗುಪ್ತಚರ ವರದಿ ಸ್ಪಷ್ಟಪಡಿಸಿದೆ.

9/11 ಆದ್ಮೇಲೆ ಯುಎಸ್ ಜೊತೆ ಹೋರಾಡಿದ್ದು ಐತಿಹಾಸಿಕ ತಪ್ಪು: ಇಮ್ರಾನ್!

ಜಮ್ಮು, ಪಠಾಣ್ ಕೋಟ್, ಜೈಪುರ, ಗಾಂದಿನಗರ,  ಕಾನ್ಪುರ, ಲಕ್ನೌ ಸೇರಿದಂತೆ ಅನೇಕ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ವಾಯನೆಲೆಗಳ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ಪಂಜಾಬ್ ನ  ಟಾರನ್ ಜಿಲ್ಲೆಯ ರಾಜೋಕೆ ಗ್ರಾಮದಲ್ಲಿ ಡ್ರೋಣ್ ಹ್ಯಾಂಡ್ ಗ್ರೆನೇಡ್ಸ್  ಬಿಳಿಸುತ್ತಿರುವ ಪಾಕಿಸ್ತಾನದ ವಿರುದ್ಧ ಕ್ರಮಕ್ಕೆ ಪಂಜಾಬ್ ಸಿಎಂ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು.

ನಮ್ಮ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎನ್ನುವ ಮುಖಾಂತರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತ ಎಲ್ಲದಕ್ಕೂ ಸಿದ್ಧವಿದೆ ಎಂಬ ಉತ್ತರವನ್ನು ನೀಡಿದೆ. ಗುಪ್ತಷರ ಇಲಾಖೆ ನೀಡಿರುವ ಆತಂಕಕಾರಿ ಮಾಹಿತಿಯ ನಂತರ ದೇಶದ ಉತ್ತರ ಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.