ಕೋಪಾ ಸೂಡಾಮೇರಿಕಾ ಟೂರ್ನಿಯ ಫೈನಲ್'ನಲ್ಲಿ ಅಥ್ಲೆಟಿಕೋ ನ್ಯಾಷನಲ್ ತಂಡ ವಿರುದ್ಧ ಪಂದ್ಯದಲ್ಲಿ ಪಾಲ್ಗೊಳ್ಳಲು ತಂಡವು ಮೆಡೆಲಿನ್'ಗೆ ಪ್ರಯಾಣಿಸುತ್ತಿತ್ತು. 70ಕ್ಕೂ ಹೆಚ್ಚು ಜನರು ಈ ವಿಮಾನದಲ್ಲಿದ್ದರು.

ಬಗೋಟಾ(ನ. 29): ಬ್ರೆಜಿಲ್ ದೇಶದ ಚಾಪೆಕೂನ್ಸೆ ರಿಯಲ್ ಫುಟ್ಬಾಲ್ ತಂಡದ ಆಟಗಾರರು ಹಾಗೂ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಅಪಘಾತಕ್ಕೀಡಾದ ದಾರುಣ ಘಟನೆ ವರದಿಯಾಗಿದೆ. ಮೆಡೆಲಿನ್ ಏರ್'ಪೋರ್ಟ್'ನತ್ತ ಸಾಗುತ್ತಿದ್ದ ವಿಮಾನವು ಕೊಲಂಬಿಯಾದ ಮೆಡೆಲಿನ್ ನಗರದ ಬಳಿ ಕೆಳಗುರುಳಿತೆನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಪಾ ಸೂಡಾಮೇರಿಕಾ ಟೂರ್ನಿಯ ಫೈನಲ್'ನಲ್ಲಿ ಅಥ್ಲೆಟಿಕೋ ನ್ಯಾಷನಲ್ ತಂಡ ವಿರುದ್ಧ ಪಂದ್ಯದಲ್ಲಿ ಪಾಲ್ಗೊಳ್ಳಲು ತಂಡವು ಮೆಡೆಲಿನ್'ಗೆ ಪ್ರಯಾಣಿಸುತ್ತಿತ್ತು. 70ಕ್ಕೂ ಹೆಚ್ಚು ಜನರು ಈ ವಿಮಾನದಲ್ಲಿದ್ದರು. ಆದರೆ, ಎಷ್ಟು ಜನರು ಅಪಘಾತದಲ್ಲಿ ದುರ್ಮರಣವನ್ನಪ್ಪಿದ್ದಾರೆ ಎಂಬ ವಿವರ ಇನ್ನೂ ಲಭ್ಯವಾಗಿಲ್ಲ.