Asianet Suvarna News Asianet Suvarna News

ಈ ಬೋರ್ಡ್ ಓದಿ: ಈಕೆಗೊಂದು ಸಲಾಂ ಹೇಳಿ!

ಭಿಕ್ಷುಕರಿಗೆ ಉಚಿತ ಪಿಜ್ಜಾ ನೀಡುವ ಮಿಶೆಲ್ ಲುಸಿಯರ್! ಇಲ್ಲಿ ಭಿಕ್ಷುಕರು ಒಳಗೆ ಬಂದು ಉಚಿತ ಪಿಜ್ಜಾ ಪಡೆಯುತ್ತಾರೆ! ಗ್ರಾಹಕರು ಕಸದ ತೊಟ್ಟಿಯಲ್ಲಿ ಬಿಸಾಕಿದ ಪಿಜ್ಜಾ ತಿನ್ನುತ್ತಿದ್ದ ಭಿಕ್ಷುಕರು! ಬೋರ್ಡ್ ಹಾಕಿ ಒಳಗೆ ಬಂದು ಪಿಜ್ಜಾ ತಿನ್ನುವಂತೆ ಮನವಿ! ನಿರ್ಗತಿಕರ ಪಾಲಿನ ಅನ್ನದಾತೆ ಮಿಶೆಲ್ ಲುಸಿಯರ್

Pizza outlet offers free food for homeless
Author
Bengaluru, First Published Oct 9, 2018, 6:34 PM IST

ಫಾರ್ಗೋ(ಅ.9): ಅದೊಂದು ಪಿಜ್ಜಾ ಶಾಪ್. ನಿತ್ಯವೂ ಅಲ್ಲಿ ನೂರಾರು ಜನ ಪಿಜ್ಜಾ ತಿನ್ನಲು ಬರುತ್ತಾರೆ. ಕೆಲವರು ಹೊಟ್ಟೆ ತುಂಬಾ ತಿಂದು ಹೋದರೆ, ದುಡ್ಡಿದ್ದೋರು ಶೋಕಿಗೆ ಅರ್ಧ ತಿಂದು ಇನ್ನರ್ಧ ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗುತ್ತಿದ್ದರು.

ಇದಕ್ಕಾಗಿಯೇ ಕಾಯುತ್ತಿದ್ದ ಭಿಕ್ಷುಕರು ಆ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಅರ್ಧ ಪಿಜ್ಜಾ ತೋಗೊಂಡು ತಿನ್ನುತ್ತಿದ್ದರು. ಇದರಲ್ಲೇನು ವಿಶೇಷ?. ಇದು ಎಲ್ಲಾ ಕಡೆ ನಡೆಯುವ ಸಾಮಾನ್ಯ ಸಂಗತಿ ಅಂತೀರಾ?. ಇಷ್ಟೇ ಆಗಿದ್ದರೆ ಖಂಡಿತ ಇದು ಸುದ್ದಿಯಾಗುತ್ತಿರಲಿಲ್ಲ. ಬೇರೊಬ್ಬರ ಎಂಜಲು ಪಿಜ್ಜಾ ತಿನ್ನುತ್ತಿದ್ದ ಭಿಕ್ಷುಕರಿಗೆ ಪಿಜ್ಜಾ ಅಂಗಡಿ ಮಾಲೀಕ ಮಾಡಿದ್ದೇನು ಎಂಬುದೇ ಈ ಸುದ್ದಿಯ ತಿರುಳು.

ಮಿಶೆಲ್ ಲುಸಿಯರ್ ಎಂಬ ಮಹಿಳೆ ಉತ್ತರ ಡಕೋಟಾದ ಫಾರ್ಗೋದಲ್ಲಿ ಪಿಜ್ಜಾ ಮಳಿಗೆಯೊಂದನ್ನು ನಡೆಸುತ್ತಾರೆ. ಮಿಶೆಲ್ ಅಂಗಡಿಗೆ ನಿತ್ಯವೂ ನೂರಾರು ಜನ ಪಿಜ್ಜಾ ತಿನ್ನಲು ಬರುತ್ತಾರೆ. ಹಾಗೆ ಬಂದವರು ಬಿಟ್ಟು ಹೋದ ಪಿಜ್ಜಾ ಭಿಕ್ಷುಕರ ಪಾಲಿನ ಭೋಜನವಾಗುತ್ತಿತ್ತು.

ಇದನ್ನು ಗಮನಿಸಿದ ಮಿಶೆಲ್, ಕೂಡಲೇ ತಮ್ಮ ಅಂಗಡಿ ಹೊರಗೆ ಬೋರ್ಡ್ ಹಾಕಿ, ಬೇರೊಬ್ಬರ ಪಿಜ್ಜಾ ತಿನ್ನಬೇಡಿ, ಅಂಗಡಿಯೊಳಗೆ ಬಂದು ಉಚಿತವಾಗಿ ಪಿಜ್ಜಾ ತೆಗೆದುಕೊಂಡು ಹೋಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

‘ನೀವೂ ನಮ್ಮಂತೆ ಮನುಷ್ಯರು, ಕಸದ ಬುಟ್ಟಿಯಲ್ಲಿ ಬಿದ್ದ ಆಹಾರಕ್ಕಿಂತ ಉತ್ತಮ ಆಹಾರ ತಿನ್ನಲು ಖಂಡಿತ ನೀವು ಯೋಗ್ಯರು. ಹಾಗಾಗಿ ಯಾವುದೇ ಸಂಕೋಚವಿಲ್ಲದೇ ನನ್ನ ಅಂಗಡಿಯೊಳಗೆ ಬಂದು ಪಿಜ್ಜಾ ತಿಂದು ಹೋಗಿ. ನಿಮ್ಮನ್ನು ಇಲ್ಲಿ ಯಾರೂ ಪ್ರಶ್ನಿಸಲಾರರು’ ಎಂದು ಮಿಶೆಲ್ ಬೋರ್ಡ್ ಹಾಕಿದ್ದಾರೆ. 

Follow Us:
Download App:
  • android
  • ios