ಹಾಸನ ನಗರದೊಳಗೆ ಹಾಸನ-ಮಂಗಳೂರು ರೈಲ್ವೇ ಲೈನ್‌ನಲ್ಲಿ ಲೆವೆಲ್ ಕ್ರಾಸಿಂಗ್ 3ರಲ್ಲಿ ಮೇಲ್ಸೆತುವೆ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು. ಹಾಸನದಲ್ಲಿರುವ ಹಳೆಯ ರೈಲ್ವೇ ನಿಲ್ದಾಣವು ನಗರದಿಂದ ದೂರದಲ್ಲಿದ್ದು, ಹೊಸ ರೈಲ್ವೇ ನಿಲ್ದಾಣಕ್ಕೆ ಬಸ್‌ಸ್ಟ್ಯಾಂಡ್ ಬಳಿಯೇ ಜಾಗ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಜಾಗದಲ್ಲಿ ರೈಲ್ವೇ ನಿಲ್ದಾಣ ಕಾಮಗಾರಿ ಪ್ರಾರಂಭಿಸಬೇಕು ಎಂದು ದೇವೇಗೌಡ ರೈಲ್ವೇ ಸಚಿವರಲ್ಲಿ ಮನವಿ ಮಾಡಿದ್ದಾರೆ.
ನವದೆಹಲಿ(ಡಿ.29): ಹಾಸನ ಜಿಲ್ಲೆಯ ರೈಲ್ವೇ ಸಂಬಂಧಿ ವಿವಿಧ ಬೇಡಿಕೆಗಳ ಬಗ್ಗೆ ಮಾಜಿ ಪ್ರಧಾನಿ, ಹಾಸನದ ಸಂಸದ ಎಚ್.ಡಿ.ದೇವೇಗೌಡ ಅವರು ರೈಲ್ವೇ ಸಚಿವ ಪಿಯೂಷ್ ಗೊಯೆಲ್ ಅವರ ಜೊತೆ ಗುರುವಾರ ಚರ್ಚೆ ನಡೆಸಿದರು.
ದೆಹಲಿಯ ತಮ್ಮ ಸರ್ಕಾರಿ ನಿವಾಸ 5, ಸಫ್ದರ್ ಜಂಗ್ ಲೇನ್ಗೆ ಆಗಮಿಸಿದ ರೈಲ್ವೇ ಸಚಿವರಲ್ಲಿ ದೇವೇಗೌಡ ಅವರು ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಎಚ್.ಡಿ.ರೇವಣ್ಣ ಅವರು ಕೂಡ ಉಪಸ್ಥಿತರಿದ್ದರು. ಹಾಸನ ನಗರದೊಳಗೆ ಹಾಸನ-ಮಂಗಳೂರು ರೈಲ್ವೇ ಲೈನ್ನಲ್ಲಿ ಲೆವೆಲ್ ಕ್ರಾಸಿಂಗ್ 3ರಲ್ಲಿ ಮೇಲ್ಸೆತುವೆ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು. ಹಾಸನದಲ್ಲಿರುವ ಹಳೆಯ ರೈಲ್ವೇ ನಿಲ್ದಾಣವು ನಗರದಿಂದ ದೂರದಲ್ಲಿದ್ದು, ಹೊಸ ರೈಲ್ವೇ ನಿಲ್ದಾಣಕ್ಕೆ ಬಸ್ಸ್ಟ್ಯಾಂಡ್ ಬಳಿಯೇ ಜಾಗ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಜಾಗದಲ್ಲಿ ರೈಲ್ವೇ ನಿಲ್ದಾಣ ಕಾಮಗಾರಿ ಪ್ರಾರಂಭಿಸಬೇಕು ಎಂದು ದೇವೇಗೌಡ ರೈಲ್ವೇ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು- ಹಾಸನ- ಮಂಗಳೂರು ವಿಭಾಗದಲ್ಲಿ ರೈಲ್ವೇ ಓಡಾಟವನ್ನು ಹೆಚ್ಚಿಸಬೇಕು. 2018ರ ಫೆಬ್ರುವರಿಯಲ್ಲಿ ಶ್ರವಣ ಬೆಳಗೊಳದಲ್ಲಿ ಮಹಾಮಸ್ತಾಕಾಭಿಷೇಕ ನಡೆಯಲಿದ್ದು, ಈ ಸಂದರ್ಭದಲ್ಲಿ ಶ್ರವಣಬೆಳಗೊಳದ ಮೂಲಕ ಹಾಸನ
ಮತ್ತು ಬೆಂಗಳೂರು ಮಾರ್ಗದಲ್ಲಿ ಹೆಚ್ಚುವರಿ ರೈಲು ಓಡಿಸಬೇಕು. ಮುಂಜಾನೆ 5ರಿಂದ ರಾತ್ರಿ 11ರವರೆಗೆ ಗಂಟೆಗೊಂದರಂತೆ ಬೆಂಗಳೂರು- ಹಾಸನ, ಹಾಸನ-ಬೆಂಗಳೂರು ಮಧ್ಯೆ ವಿಶೇಷ ರೈಲು ಓಡಲು ವ್ಯವಸ್ಥೆ ಮಾಡಿ ಎಂದು ಮಾಜಿ ಪ್ರಧಾನಿಗಳು ಗೊಯೆಲ್ ಅವರಲ್ಲಿ ಕೋರಿದ್ದಾರೆ.ಬಂದರು ನಗರಿಗಳಾದ ಚೆನ್ನೈ-ಮಂಗಳೂರನ್ನು ಸಂಪರ್ಕಿಸುವ ರೈಲುಗಳನ್ನು ಹಾಸನ, ಬೆಂಗಳೂರು ಮೂಲಕ ಓಡಿಸಿ, ಚಿಕ್ಕಮಗಳೂರು ಮತ್ತು ಸಕಲೇಶಪುರದ ರೈಲ್ವೇ ಲಿಂಕ್ ಯೋಜನೆಗಳನ್ನು ಬೇಲೂರು ಮತ್ತು ಹಾಸನದ ಮೂಲಕ ಜಾರಿಗೊಳಿಸಿ. ಏಕೆಂದರೆ ಪ್ರಸ್ತಾವಿತ ಕಡೂರು- ಚಿಕ್ಕಮಗಳೂರು- ಸಕಲೇಶಪುರ ಯೋಜನೆಗೆ ಪರಿಸರ ಸಂಬಂಧಿ ತೊಡಕುಗಳಿವೆ ಎಂದು ರೈಲ್ವೇ ಸಚಿವರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ದೇವೇಗೌಡರು ಮಾಡಿರುವುದಾಗಿ ಮೂಲಗಳು ತಿಳಿಸಿವೆ.
