ಸಾಧನಾ ಸಮಾವೇಶಕ್ಕೆ ಸಾರ್ವಜನಿಕರ ಹಣ ದುರ್ಬಳಕೆ ಆರೋಪ ಮಹಾಲೆಕ್ಕಪರಿಶೋಧಕರಿಂದ ತನಿಖೆ ನಡೆಸಿ: ಅರ್ಜಿ
ಬೆಂಗಳೂರು: ಸಿಎಂ ಸಿದ್ದರಾಮಯ್ಯರ ಮಹತ್ವಾಕಾಂಕ್ಷೆಯ ಸಾಧನಾ ಸಮಾವೇಶಕ್ಕೆ ಸಂಕಷ್ಟ ಎದುರಾಗಿದೆ.
ಸಾಧನಾ ಸಮಾವೇಶಕ್ಕೆ ಸಾರ್ವಜನಿಕರ ಹಣ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿ ಕೀರ್ತಿವರ್ಧನ್ ಎಂಬವರು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ವೈಯಕ್ತಿಕ, ರಾಜಕೀಯ ಹಿತಾಸಕ್ತಿಗಾಗಿ ಸರ್ಕಾರಿ ಹಣ ದುರ್ಬಳಕೆ ಮಾಡಲಾಗುತ್ತಿದೆ. ಸಮಾವೇಶಗಳು ಪ್ರತಿಪಕ್ಷ ನಾಯಕರ ವಿರುದ್ಧ ಆರೋಪಕ್ಕೆ ವೇದಿಕೆಯಾಗಿದೆ. ಸಾಧನಾ ಸಮಾವೇಶ ವ್ಯಯಸಿರುವ ಹಣ ಅಕ್ರಮ, ಕಾನೂನು ಬಾಹಿರ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಮಹಾಲೆಕ್ಕಪರಿಶೋಧಕರಿಂದ ತನಿಖೆ ನಡೆಸಿ, ಸಮಾವೇಶಗಳಿಗೆ ವ್ಯಯಿಸಿರುವ ಹಣವನ್ನು ಸಿಎಂ ಸಿದ್ದರಾಮಯ್ಯ ಅವರಿಂದ ವಸೂಲಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
