Asianet Suvarna News Asianet Suvarna News

ಫೋನ್ ಟ್ಯಾಪಿಂಗ್ ಪ್ರಕರಣ : FIR ಹಾಕಿದ CBI, ತನಿಖೆ ಶುರು

ಫೋನ್ ಟ್ಯಾಪಿಂಗ್ ಕೇಸ್ ಗೆ FIR| ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ FIR ಹಾಕಿದ CBI| ಆಗಸ್ಟ್ 19ಕ್ಕೆ ಪ್ರಕರಣ ಸಿಬಿಐಗೆ ವಹಿಸಿದ್ದ ಸರ್ಕಾರ|
ಮಾಹಿತಿ ತಂತ್ರಜ್ಞಾನ ಕಾಯ್ದೆ 22, ಇಂಡಿಯನ್ ಟೆಲಿಗ್ರಾಫ್ ಕಾಯ್ದೆ 26ರ ಅಡಿಯಲ್ಲಿ FIR|ಸುಮಾರು 1 ವರ್ಷ ಕಾಲದ ಫೋನ್ ಟ್ಯಾಪ್ ತನಿಖೆ

Phone Tapping CBI registered case on the request of Karnataka govt
Author
Bengaluru, First Published Aug 31, 2019, 8:17 PM IST
  • Facebook
  • Twitter
  • Whatsapp

ಬೆಂಗಳೂರು, [ಆ.31]: ರಾಜ್ಯ ರಾಜ್ಯಕಾರಣದಲ್ಲಿ ಸಂಚಲನ ಮೂಡಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಿಬಿಐ ಎಫ್ ಐಆರ್ ದಾಖಲಿಸಿಕೊಂಡಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 22 ಮತ್ತು ಇಂಡಿಯನ್ ಟೆಲಿಗ್ರಾಫ್ ಕಾಯ್ದೆ 26 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, 2018ರ ಆಗಸ್ಟ್ 1ರಿಂದ 2019ರ ಆಗಸ್ಟ್ 19ರವರೆಗೆ [ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಸಮಯ] ತನಿಖೆ ನಡೆಯಲಿದೆ.

ಫೋನ್ ಟ್ಯಾಪಿಂಗ್: ಯಾರ‍್ಯಾರಿಗೆ ಸಿಬಿಐ ಉರುಳು? ಇಲ್ಲಿದೆ ಫುಲ್ ಡಿಟೇಲ್ಸ್

CBI ಎಸ್ ಪಿ ಕಿರಣ್.S ಅವರು ತನಿಖಾ ತಂಡವನ್ನು ರಚಿಸಿದ್ದು, ಸಿಬಿಐ DySp ಮುಖೇಶ್ ಕುಮಾರ್ ಅವರನ್ನು ತನಿಖಾಧಿಕಾರಿ ನೇಮಿಸಿದ್ದಾರೆ. ಸದ್ಯಕ್ಕೆ ಸಿಬಿಐ FIRನಲ್ಲಿ ಕುಮಾರಸ್ವಾಮಿ ಹೆಸರು ಇಲ್ಲ. ಅಪರಿಚಿತ ಜನಪ್ರತಿನಿಧಿಗಳು, ಪಬ್ಲಿಕ್ ಸರ್ವೆಂಟ್ಸ್, ಖಾಸಗಿ ವ್ಯಕ್ತಿಗಳು ಎಂದಷ್ಟೇ FIRನಲ್ಲಿ ಉಲ್ಲೇಖವಾಗಿದೆ.

ಇದು ರಾಜಕಾರಣಿಗಳಿಗೂ ಮತ್ತು ಅಧಿಕಾರಿಗಳಿಗೂ ಅನ್ವಯವಾಗಲಿದೆ. ಇದರಿಂದ ಕೆಲ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಟೆನ್ಷನ್ ಶುರುವಾಗಿದೆ. ಅಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನದ ಹಂತದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೆಲ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಪೊಲೀಸ್ ಅಧಿಕಾರಿಗಳ ಪೋನ್ ಟ್ಯಾಪಿಂಗ್ ಮಾಡಿಸಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿದೆ.

ಈ ಪ್ರಕರಣ ಸ್ವಲ್ಪ ದಿನ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಈ ಕೇಸ್ ಅನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿತ್ತು.

Follow Us:
Download App:
  • android
  • ios