ವಿಪ್ರೋ ಮುಖ್ಯಸ್ಥ ಅಜಿಂ ಪ್ರೇಮ್‌ಜಿಗೆ ಫ್ರಾನ್ಸ್ ಅತ್ಯುನ್ನತ ಗೌರವ | 'ಚೆವೆಲಿಯರ್ ಲೆಜೆನ್ ಆಫ್ ಆನರ್' ಗೌರವದ ಗರಿ 

ನವದೆಹಲಿ (ನ. 27): ಬೆಂಗಳೂರು ಮೂಲದ ವಿಪ್ರೋ ಕಂಪನಿಯ ಮುಖ್ಯಸ್ಥ ಅಜೀಂ ಪ್ರೇಮ್‌ಜೀ ಅವರಿಗೆ ಫ್ರಾನ್ಸ್ ಸರ್ಕಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಸಾಂತ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರೇಮ್‌ಜೀ ಅವರಿಗೆ ಚೆವೆಲಿಯರ್ ಲೆಜೆನ್ ಆಫ್ ಆನರ್ ಗೌರವ ನೀಡಿ ಪುರಸ್ಕರಿಸಲಾಗುತ್ತದೆ. ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಉದ್ದಿಮೆ ಅಭಿವೃದ್ಧಿ, ಫ್ರಾನ್ಸ್‌ನಲ್ಲಿ ಅವರ ಆರ್ಥಿಕ ಅಭಿವೃದ್ಧಿ ಹಾಗೂ ಅಜೀಂ ಪ್ರೇಮ್‌ಜೀ ಫೌಂಡೇಶನ್ ಮತ್ತು ವಿವಿ ಮೂಲಕ ನೀಡಲಾಗುತ್ತಿರುವ ಆಮೂಲಾಗ್ರ ಸೇವೆಯನ್ನು ಪರಿಗಣಿಸಿ, ಈ ಪ್ರಶಸ್ತಿ ನೀಡಲಾಗುತ್ತಿದೆ.