ಬೆಂಗಳೂರು :  ಅಂತಾರಾಷ್ಟ್ರೀಯಮಟ್ಟದಲ್ಲಿ ತೈಲಬೆಲೆ ಏರಿಕೆ, ರುಪಾಯಿ ದರ ಕುಸಿತದ ಪರಿಣಾಮ ದೇಶದಲ್ಲಿ ಪೆಟ್ರೋಲ್‌ ದರ ಏರಿಕೆಯಾಗುತ್ತಿದೆ. ಲೀಟರ್‌ ಪೆಟ್ರೋಲ್‌ ದರ ಕರ್ನಾಟಕದಲ್ಲಿ ಈಗ 80ರ ಗಡಿ ದಾಟಿದೆ!

ನಾಲ್ಕು ದಿನಗಳಿಂದ ಪೆಟ್ರೋಲ್‌ ದರದಲ್ಲಿ ಏರಿಕೆಯಾಗುತ್ತಿದ್ದು, ಅದೀಗ .80ರ ಗಡಿ ದಾಟಿದೆ. ಆ.19ರಂದು ಲೀಟರ್‌ ಪೆಟ್ರೋಲ್‌ಗೆ ಬೆಂಗಳೂರಲ್ಲಿ .79.91 ದರ ಇತ್ತು. ಈಗ ಶುಕ್ರವಾರ ಅದು .80.19 ಆಗಿದೆ. ಇನ್ನು ದಾವಣಗೆರೆ ಜಿಲ್ಲೆಯಲ್ಲಿ ಪೆಟ್ರೋಲ್‌ ದರ .81.35 ತಲುಪಿದೆ. ಮೈಸೂರಲ್ಲಿ ಸದ್ಯ ಪೆಟ್ರೋಲ್‌ .79.94ದರದಲ್ಲಿ ಮಾರಾಟವಾಗುತ್ತಿದೆ. ಇನ್ನು ಡೀಸೆಲ್‌ ರಾಜ್ಯಾದ್ಯಂತ 71, 72 ರುಪಾಯಿಯಲ್ಲಿ ಮಾರಾಟವಾಗುತ್ತಿದೆ.

ಅಂತಾರಾಷ್ಟ್ರೀಯ ಬೆಳವಣಿಗೆಗಳ ಪರಿಣಾಮದಿಂದ ಈ ರೀತಿ ದರ ಏರಿಕೆಯಾಗುತ್ತಿದ್ದರೂ ಗ್ರಾಹಕರ ಮೇಲೆ ಇದರಿಂದ ಸಾಕಷ್ಟುಹೊರೆ ಬೀಳುತ್ತಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದರ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಪೆಟ್ರೋಲಿಯಂ ಡೀಲ​ರ್‍ಸ್ ಅಸೋಸಿಯೇಷನ್‌ ಸದಸ್ಯ ತಾರಾನಾಥ ಆಗ್ರಹಿಸಿದ್ದಾರೆ.