ನಾಳೆಯಿಂದ ಪಾಂಡಿಚೆರಿ,ವಿಶಾಖಪಟ್ಟಣ,ಉದಯ್'ಪುರ, ಜೆಮ್ಶೆಡ್'ಪುರ ಹಾಗೂ ಛತ್ತೀಸ್'ಘಡ ಪಟ್ಟಣಗಳಲ್ಲಿ ತೈಲ ಬೆಲೆಗಳು ನಿತ್ಯ ಏರಿಳಿತವಾಗಲಿದೆ. ನಂತರದ ದಿನಗಳಲ್ಲಿ ಈ ಕ್ರಮವನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಲಾಗುವುದಾಗಿ ತೈಲೋದ್ಯಮ ಕಂಪನಿಗಳು ತಿಳಿಸಿವೆ.
ನವದೆಹಲಿ(ಏ.30): ಕೇಂದ್ರ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗಳನ್ನು ಏರಿಸಿದ್ದು, ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ.
ಪೆಟ್ರೋಲ್ 1 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು 44 ಪೈಸೆ ಏರಿಸಲಾಗಿದೆ ದೆಹಲಿಯಲ್ಲಿ ಮಾತ್ರ ಏರಿಕೆಯಾಗಿದೆ. 15 ದಿನಗಳ ಹಿಂದಷ್ಟೆ ಬೆಲೆಯನ್ನು ಕ್ರಮವಾಗಿ 1.78 ಹಾಗೂ 1.22 ರೂ.ಗೆ ಏರಿಸಲಾಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಳಿತ ಪ್ರಕ್ರಿಯೆಯೇ ಬೆಲೆ ಹೆಚ್ಚಳಕೆ ಕಾರಣ ಎನ್ನಲಾಗಿದೆ.