ಪ್ರತಿ 15 ದಿನಕ್ಕೊಮ್ಮೆ ತೈಲ ದರವನ್ನು ಪರಿಷ್ಕೃರಿಸುವುದರ ಬದಲು ಅಂತಾರಾಷ್ಟ್ರೀಯ ದರಕ್ಕೆ ತಕ್ಕಂತೆ ಪ್ರತಿ ದಿನವೂ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಬದಲಾವಣೆ ಮಾಡಲು ತೈಲ ಕಂಪನಿಗಳು ಮುಂದಾಗಿವೆ.
ನವದೆಹಲಿ(ಎ.08): ಪ್ರತಿ 15 ದಿನಕ್ಕೊಮ್ಮೆ ತೈಲ ದರವನ್ನು ಪರಿಷ್ಕೃರಿಸುವುದರ ಬದಲು ಅಂತಾರಾಷ್ಟ್ರೀಯ ದರಕ್ಕೆ ತಕ್ಕಂತೆ ಪ್ರತಿ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆ ಮಾಡಲು ತೈಲ ಕಂಪನಿಗಳು ಮುಂದಾಗಿವೆ.
ದೇಶದ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ.95ರಷ್ಟುನಿಯಂತ್ರಣ ಹೊಂದಿರುವ ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ತಾನ್ ಪೆಟ್ರೋಲಿ ಯಂ ಕಂಪನಿಗಳ ಮುಖ್ಯಸ್ಥರು ದೈನಂದಿನ ಆಧಾರದ ಮೇಲೆ ತೈಲ ದರ ಪರಿಷ್ಕರಿಸುವ ನಿಟ್ಟಿನಿಂದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಜತೆ ಚರ್ಚೆ ನಡೆಸಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
‘ದೈನಂದಿನ ತೈಲ ಬೆಲೆ ಪರಿಷ್ಕರಣೆ ಮಾಡುವ ಪ್ರಸ್ತಾವನೆ ಹಿಂದಿನಿಂದಲೂ ಇತ್ತು. ಆದರೆ ಈಗ ನಾವು ಅದನ್ನು ಜಾರಿಗೊಳಿಸುವ ತಂತ್ರಜ್ಞಾನವನ್ನು ಹೊಂದಿದ್ದೇವೆ. ನಾವು ಅದನ್ನು ಜಾರಿ ಮಾಡುತ್ತೇವೆ' ಎಂದು ಮುಖ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿ: ಕನ್ನಡಪ್ರಭ
