Asianet Suvarna News Asianet Suvarna News

ಮತ್ತೆ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ: ಇಂದಿನ ಬೆಲೆಗಳು..!

ಕಳೆದ ತಿಂಗಳು ಸತತ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ವಾಹನ ಸವಾರರಿಗೆ ಇದೀಗ ಕೊಂಚ ನಿರಾಳರಾಗಿದ್ದಾರೆ. ಯಾಕಂದ್ರೆ ನವೆಂಬರ್ ತಿಂಗಳಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸತತವಾಗಿ ಇಳಿಕೆಯಾಗುತ್ತಿದೆ. ಹಾಗಾದ್ರೆ ಇಂದು [ಮಂಗಳವಾರ] ಎಷ್ಟು ಇಳಿದಿದೆ? ನೋಡಿ

Petrol, diesel prices slashed for sixth day. Check latest rates here
Author
Bengaluru, First Published Nov 20, 2018, 10:50 AM IST

ನವದೆಹಲಿ, [ನ.20]: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸತತವಾಗಿ ಕುಸಿತ ಕಾಣುತ್ತಿದೆ. ಇದ್ರಿಂದ ಪೆಟ್ರೋಲ್​, ಡೀಸೆಲ್​ ದರ ದಿನದಿಂದ ದಿನ ಪೈಸೆಗಳಲ್ಲಿ ಇಳಿಕೆಯಾಗುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಪೆಟ್ರೋಲ್​, ಡೀಸೆಲ್​ ಬೆಲೆ ಕ್ರಮವಾಗಿ 14 ಪೈಸೆ, 12 ಪೈಸೆ ಇಳಿಕೆಯಾಗಿದ್ದು, ಇಂದು [ಮಂಗಳವಾರ] ವೇಳೆಗೆ ಲೀ. 76 ರೂ.ಗೆ ತಲುಪಿದೆ.

ಇನ್ ಟೋಟಲ್ ಪೆಟ್ರೋಲ್ ದರ ಇಳಿದಿದ್ದೆಷ್ಟು?: ಲೆಕ್ಕಾಚಾರ ಹೇಳೋದಿಷ್ಟು!

ಪೆಟ್ರೋಲ್​ ಬೆಲೆ ಮೂರು ವಾರಗಳಲ್ಲಿ ಸುಮಾರು 8 ರೂ.ಗಳಷ್ಟು ಇಳೆಕೆಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಪೆಟ್ರೋಲ್​, ಡೀಸೆಲ್​ ಬೆಲೆ ಕ್ರಮವಾಗಿ ಪ್ರತಿ ಲೀಟರ್ ಗೆ ಪೆಟ್ರೋಲ್​ 76.38 ರೂ. ಮತ್ತು ಡೀಸೆಲ್​ 71.27 ರೂ.ಇದೆ.

ಇನ್ನು ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಲೀಟರ್ ಗೆ ಪೆಟ್ರೋಲ್​ 76.99 ರೂ. ಮತ್ತು ಡೀಸೆಲ್​ 71.65 ರೂ.ಇದೆ.

Follow Us:
Download App:
  • android
  • ios