ನಾಲ್ಕು ವರ್ಷಗಳಲ್ಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ

First Published 3, Apr 2018, 12:36 PM IST
Petrol Diesel Prices hit fresh record
Highlights

ಪೆಟ್ರೋಲ್ ಡೀಸೆಲ್ ದರವು ಇದೀಗ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ. ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆಯು 73.95 ರು.ಗಳಿಗೆ ಏರಿಕೆಯಾಗಿದೆ.

ನವದೆಹಲಿ : ಪೆಟ್ರೋಲ್ ಡೀಸೆಲ್ ದರವು ಇದೀಗ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ. ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆಯು 73.95 ರು.ಗಳಿಗೆ ಏರಿಕೆಯಾಗಿದೆ.

ಇನ್ನು ಡೀಸೆಲ್ ದರವು 64.82ರಷ್ಟಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕೂಡ ಇಂಧನ ದರ ಏರಿಕೆಯಾಗಿದೆ.

ಮಂಗಳವಾರ  ಪ್ರತೀ ಲೀಟರ್ ಪೆಟ್ರೋಲ್ ಮೇಲೆ 12 ಪೈಸೆಯಷ್ಟು ಏರಿಕೆ ಕಂಡು ಬಂದಿದ್ದು, ಪ್ರತೀ ಲೀಟರ್ ಡೀಸೆಲ್ ಬೆಲೆಯಲ್ಲಿ 13 ಪೈಸೆಯಷ್ಟು ಏರಿಕೆಯಾಗಿದೆ. ಪೆಟ್ರೋಲ್ ದರ ಏರಿಕೆಯು ನಾಲ್ಕು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ್ದಾಗಿದೆ.

loader