Asianet Suvarna News Asianet Suvarna News

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆ

ನೋಟ್ ಬ್ಯಾನ್`ನಿಂದಾಗಿ ಹೊಸ ನೋಟುಗಳನ್ನ ಪಡೆಯಲು ಬ್ಯಾಂಕ್ ಮತ್ತು ಎಟಿಎಂಗಳಿಗೆ ಎಡತಾಕುತ್ತಿರುವ ದೇಶದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಪೆಟ್ರೋಲ್ ಬೆಲೆಯಲ್ಲಿ 2.21 ರೂ. ಮತ್ತು ಡೀಸಲ್ ಬೆಲೆಯಲ್ಲಿ 1.79 ರೂ. ಏರಿಕೆಯಾಗಿದೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

petrol and disel price hikes again

ನವದೆಹಲಿ(ಡಿ.16): ನೋಟ್ ಬ್ಯಾನ್`ನಿಂದಾಗಿ ಹೊಸ ನೋಟುಗಳನ್ನ ಪಡೆಯಲು ಬ್ಯಾಂಕ್ ಮತ್ತು ಎಟಿಎಂಗಳಿಗೆ ಎಡತಾಕುತ್ತಿರುವ ದೇಶದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಪೆಟ್ರೋಲ್ ಬೆಲೆಯಲ್ಲಿ 2.21 ರೂ. ಮತ್ತು ಡೀಸಲ್ ಬೆಲೆಯಲ್ಲಿ 1.79 ರೂ. ಏರಿಕೆಯಾಗಿದೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಈ ತಿಂಗಳಲ್ಲಿ 2ನೇ ಬಾರಿಗೆ ತೈಲ ದರ ಪರಿಷ್ಕರಣೆಯಾಗಿದ್ದು, ಡಿಸೆಂಬರ್ 1ರಂದು ಪೆಟ್ರೋಲ್ 13 ಪೈಸೆ ಮತ್ತು ಡೀಸೆಲ್ 12 ಪೈಸೆ ಏರಿಕೆ ಕಂಡಿತ್ತು.

ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿತದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಹೆಚ್ಚಾಗಿರುವುದೇ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಿಳೀಸಿದೆ.