ಮುಷರಫ್ ಪಾಸ್‌ಪೋರ್ಟ್, ಗುರುತಿನ ಚೀಟಿ ಬ್ಲಾಕ್..!

news | Friday, June 1st, 2018
Suvarna Web Desk
Highlights

ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರ ಪಾಸ್‌ಪೋರ್ಟ್ ಹಾಗೂ ಗುರುತಿನ ಚೀಟಿಯನ್ನು ಬ್ಲಾಕ್ ಮಾಡುವಂತೆ ಪಾಕಿಸ್ತಾನದ ಆಂತರಿಕ ಸಚಿವಾಲಯ ಸೂಚನೆ ನೀಡಿದೆ. ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಆಂತರಿಕ ಸಚಿವಾಲಯ ಮುಷರಫ್ ಅವರ ಪಾಸ್‌ಪೋರ್ಟ್ ಹಾಗೂ ಗುರುತಿನ ಚೀಟಿ ರದ್ದತಿಗೆ ಮುಂದಾಗಿದೆ.

ಇಸ್ಲಾಮಾಬಾದ್(ಜೂ.1): ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರ ಪಾಸ್‌ಪೋರ್ಟ್ ಹಾಗೂ ಗುರುತಿನ ಚೀಟಿಯನ್ನು ಬ್ಲಾಕ್ ಮಾಡುವಂತೆ ಪಾಕಿಸ್ತಾನದ ಆಂತರಿಕ ಸಚಿವಾಲಯ ಸೂಚನೆ ನೀಡಿದೆ. ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಆಂತರಿಕ ಸಚಿವಾಲಯ ಮುಷರಫ್ ಅವರ ಪಾಸ್‌ಪೋರ್ಟ್ ಹಾಗೂ ಗುರುತಿನ ಚೀಟಿ ರದ್ದತಿಗೆ ಮುಂದಾಗಿದೆ.

ರಾಷ್ಟ್ರೀಯ ಡೇಟಾಬೇಸ್ ಮತ್ತು ನೋಂದಣಿ ಪ್ರಾಧಿಕಾರ, ವಲಸೆ ಮತ್ತು ಪಾಸ್‌ಪೋರ್ಟ್ ನಿರ್ದೇಶನಾಲಯಕ್ಕೆ ಈಗಾಗಲೇ ಆದೇಶ ಪತ್ರ ರವಾನಿಸಲಾಗಿದ್ದು, ತಕ್ಷಣವೇ ಜಾರಿಗೆ ಬರುವಂತೆ ಪಾಸ್‌ಪೋರ್ಟ್ ಮತ್ತು ಗುರಿತಿನ ಚೀಟಿ ಅಮಾನತು ಮಾಡುವಂತೆ ಸೂಚನೆ ನೀಡಿದೆ. 

ಇಷ್ಟೇ ಅಲ್ಲದೇ ಪರ್ವೇಜ್ ಮುಷರಫ್ ಅವರ ಬ್ಯಾಂಕ್ ಖಾತೆಗಳನ್ನೂ ನಿಷ್ಕ್ರಿಯಗೊಳಿಸಿ ವಿದೇಶಕ್ಕೆ ತೆರಳದಂತೆಯೂ ನಿರ್ಬಂಧ ವಿಧಿಸಲಾಗುತ್ತದೆ. ಇದೇ ವೇಳೆ ಕೋರ್ಟ್ ಮುಷರಫ್ ಬಂಧನಕ್ಕೂ ಸೂಚನೆ ನೀಡಿದ್ದು, ವಿದೇಶದಲ್ಲಿರುವ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿದೆ.

Comments 0
Add Comment