ಮಂಗಳ ಮುಖಿಯರು ಅಟ್ಟಿಸಿಕೊಂಡು ಬಂದ ಕಾರಣಕ್ಕೆ ಕೊಟ್ಟಿಗೆಯಲ್ಲಿ ಅವಿತುಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಕಳ್ಳನೆಂದು ಭಾವಿಸಿ ಹಲ್ಲೆ ನಡೆಸಿ ಕೊಂದಿರುವ ಘಟನೆ ಕೋರೆಹುಂಡಿ ಗ್ರಾಮದಲ್ಲಿ ನಡೆದಿದೆ.
ಮೈಸೂರು(ಅ.08): ಮಂಗಳ ಮುಖಿಯರು ಅಟ್ಟಿಸಿಕೊಂಡು ಬಂದ ಕಾರಣಕ್ಕೆ ಕೊಟ್ಟಿಗೆಯಲ್ಲಿ ಅವಿತುಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಕಳ್ಳನೆಂದು ಭಾವಿಸಿ ಹಲ್ಲೆ ನಡೆಸಿ ಕೊಂದಿರುವ ಘಟನೆ ಕೋರೆಹುಂಡಿ ಗ್ರಾಮದಲ್ಲಿ ನಡೆದಿದೆ.
ಮೃತ ರಮೇಶ್ ಮೈಸೂರು ಜಿಲ್ಲೆಯ ಬದನವಾಳು ನಿವಾಸಿಯಾಗಿದ್ದು, ರಮೇಶ್ ರಸ್ತೆಯಲ್ಲಿ ಸಂಚಾರ ಮಾಡುವಾಗ ಆತನಿಗೆ ಮಂಗಳ ಮುಖಿಯರು ಆತನಿಗೆ ಕಾಟ ನೀಡಲು ಶುರು ಮಾಡಿದ್ರು. ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮೃತ ರಮೇಶ್, ಕೋರೆಹುಂಡಿ ಗ್ರಾಮದ ಚಂದ್ರಶೇಖರ್ ಎಂಬುವರ ಕೊಟ್ಟಿಗೆಗೆ ಪ್ರವೇಶ ಮಾಡಿ ಅಲ್ಲಿ ಅವಿತು ಕುಳಿತುಕೊಂಡಿದ್ದನ್ನು. ಇದನ್ನ ಗಮನಿಸಿದ ಸ್ಥಳೀಯರು ಮೃತ ರಮೇಶ್'ನನ್ನು ಕಳ್ಳನೆಂದು ಭಾವಿಸಿ ಕಂಬಕ್ಕೆ ಕಟ್ಟಿಹಾಕಿ ತೀವ್ರ ಹಲ್ಲೆ ನಡೆಸಿದ್ರು. ಹಲ್ಲೆಗೊಳಾದ ರಮೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಸಿ.ಪಿ.ಐ.ಗೋಪಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
