Published : Jan 26 2017, 12:21 PM IST| Updated : Apr 11 2018, 12:54 PM IST
Share this Article
FB
TW
Linkdin
Whatsapp
SumOfUs
ಮಾ.1ರ ನಂತರ ಈ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂದು ತನ್ನ ಸದಸ್ಯರಿಗೆ ತಮಿಳುನಾಡು ವಣಿಗರ್‌ ಸಂಗಂ ಮತ್ತು ತಮಿಳುನಾಡು ವ್ಯಾಪಾರಿಗಳ ಒಕ್ಕೂಟ ಆದೇಶಿಸಿದೆ.
ಚೆನ್ನೈ(ಜ.26): ಜಲ್ಲಿಕಟ್ಟು ಪ್ರತಿಭಟನೆ ಯಶಸ್ವಿಯಾದ ಬೆನ್ನಲ್ಲೇ ಇದೀಗ ಪೆಪ್ಸಿ, ಕೋಕಾ-ಕೋಲಾದ ವಿರುದ್ಧ ತಮಿಳಿಗರು ಬಂಡೆದ್ದಿದ್ದಾರೆ. ಹೀಗಾಗಿ, ಮಾಚ್ರ್ 1ರಿಂದ ತಮಿಳುನಾಡಿನಲ್ಲಿ ಪೆಪ್ಸಿ, ಕೋಕಾ-ಕೋಲಾದ ಆಟ ಮುಗಿಯಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಮಾ.1ರ ನಂತರ ಈ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂದು ತನ್ನ ಸದಸ್ಯರಿಗೆ ತಮಿಳುನಾಡು ವಣಿಗರ್ ಸಂಗಂ ಮತ್ತು ತಮಿಳುನಾಡು ವ್ಯಾಪಾರಿಗಳ ಒಕ್ಕೂಟ ಆದೇಶಿಸಿದೆ. ‘‘ನಮ್ಮ ಸಂಘಟನೆಯಲ್ಲಿ 15 ಲಕ್ಷ ಸದಸ್ಯರಿದ್ದು, ನಾವು ಅವರಿಗೆ ಪೆಪ್ಸಿ, ಕೋಲಾ ಮಾರದಂತೆ ಸೂಚಿಸಿದ್ದೇವೆ,'' ಎಂದು ವಣಿಗರ್ ಸಂಘದ ಅಧ್ಯಕ್ಷ ವಿಕ್ರಂ ರಾಜಾ ತಿಳಿಸಿದ್ದಾರೆ. ರೈತರು ಬರದಿಂದ ಕಂಗೆಟ್ಟಿರುವಾಗ, ಈ ಕಂಪನಿಗಳು ತಮ್ಮ ಉತ್ಪನ್ನಗಳಿಗಾಗಿ ರಾಜ್ಯದ ಜಲಮೂಲ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬುದು ಸಂಘಟನೆಗಳ ಆರೋಪ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.